ADVERTISEMENT

ಜಂಕ್‌ಫುಡ್‌ ಅಪಾಯ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 2 ಜುಲೈ 2015, 19:30 IST
Last Updated 2 ಜುಲೈ 2015, 19:30 IST

ದಿನಬೆಳಗಾದರೆ ಮಕ್ಕಳು ಮತ್ತು ಯುವಜನರು ಜಂಕ್‌ಫುಡ್‌ಗಾಗಿ ಹಾತೊರೆಯುತ್ತಾರೆ. ಜಂಕ್‌ಫುಡ್ ಕೊಬ್ಬು ಮತ್ತು ಸಕ್ಕರೆ ಹೆಚ್ಚಿರುವ ತಿನಿಸು. ಪಿಜ್ಜಾ, ಬರ್ಗರ್, ನೂಡಲ್ಸ್, ಆಲೂಗಡ್ಡೆ ಚಿಪ್ಸ್, ತಂಪು ಪಾನೀಯ ಎಲ್ಲವೂ ಜಂಕ್‌ಫುಡ್‌ಗಳೇ. ಇದು ಪ್ರಮುಖವಾಗಿ ಮಧುಮೇಹ ಮತ್ತು ಬೊಜ್ಜು ಶೇಖರಣೆಗೆ ಕಾರಣವಾಗುತ್ತದೆ.

ಜೊತೆಗೆ ಮಕ್ಕಳ ಬೌದ್ಧಿಕ ಮತ್ತು ಮಾನಸಿಕ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಉಂಟು ಮಾಡುತ್ತದೆ. ಇಡೀ ಯುವ ಸಮುದಾಯವನ್ನೇ ತನ್ನತ್ತ ಸೆಳೆದಿರುವ ಜಂಕ್‌ಫುಡ್‌ನ ಬಹುತೇಕ ತಯಾರಕರು ಬಹುರಾಷ್ಟ್ರೀಯ ಕಂಪೆನಿಗಳು. ಅವುಗಳ ಉದ್ದೇಶ ಹಣ ಮಾಡುವುದೊಂದೇ ಆಗಿರುತ್ತದೆ. 

ಹಲವಾರು ಪೋಷಕರು ಜಾಹೀರಾತುಗಳ ಮೋಡಿಗೆ ಒಳಗಾಗಿ ತಿಳಿದೋ ತಿಳಿಯದೆಯೋ ತಮ್ಮ ಮಕ್ಕಳಿಗೆ ಜಂಕ್‌ಫುಡ್‌ ಎಂಬ ನಿಧಾನ ವಿಷವನ್ನು ಉಣಿಸುತ್ತಿದ್ದಾರೆ. ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್‌ರಿಗೆ ಅವರ ಕೋಚ್ ಎರಡು ವರ್ಷ ಜಂಕ್‌ಫುಡ್ ತಿನ್ನುವುದಕ್ಕೆ ಬಿಟ್ಟಿರಲಿಲ್ಲ. ಏಕೆಂದರೆ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಕೋಚ್‌ಗೆ ಅರಿವಿತ್ತು. ಈ ಸೂಕ್ಷ್ಮವನ್ನು ಎಲ್ಲ ಪೋಷಕರೂ ಅರಿಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.