ADVERTISEMENT

ಜರಿ ಶಾಲು ಬೇಡ

ವಾಚಕರ ವಾಣಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2017, 19:30 IST
Last Updated 10 ಮಾರ್ಚ್ 2017, 19:30 IST

ಮಂಗಳೂರಿನ ಕಾರ್ಯಕ್ರಮವೊಂದರಲ್ಲಿ ಇತ್ತೀಚೆಗೆ ನನಗೆ 2 ಮೀಟರ್‌ ಉದ್ದದ, ಅತ್ಯಂತ ಆಕರ್ಷಕವಾದ ಜರಿ ಶಾಲು ಹೊದೆಸಿ ಸನ್ಮಾನ ಮಾಡಿದರು. ಮನೆಗೆ ಬಂದ ಮೇಲೆ ನನಗೆ ಅದನ್ನು ಏನು ಮಾಡುವುದು ಎಂಬ ಚಿಂತೆಯಾಯಿತು. ಏಕೆಂದರೆ ಅದನ್ನು ಚಳಿಗೆ ಹೊದೆಯುವಂತೆಯೂ ಇಲ್ಲ. ಮೈ ಒರೆಸಲೂ ಆಗುವುದಿಲ್ಲ. ನೋಡಲು ಮಾತ್ರ ಚಂದ. ಅದರಿಂದ ಯಾವ ಉಪಯೋಗವೂ ಇಲ್ಲ. ಸುಮ್ಮನೆ ಕಪಾಟಿನಲ್ಲಿ ಇಡಬೇಕಷ್ಟೆ.

ಹಾಗಾಗಿ ಸನ್ಮಾನ ಮಾಡುವವರು ಸನ್ಮಾನಿತರಿಗೆ ಶಾಲು ಹೊದೆಸಲೇ ಬೇಕೆಂದಿದ್ದರೆ ಅಬ್ಬರದ ಜರಿ ಶಾಲಿನ ಬದಲು, ಹತ್ತಿ ಬಟ್ಟೆ ಅಥವಾ ಉಣ್ಣೆಯಿಂದ ತಯಾರಿಸಿದ ಶಾಲು ಹೊದೆಸಿದರೆ ಒಳ್ಳೆಯದು. ಎಲ್ಲ ಸಂಘಟಕರೂ ಈ ನಿಟ್ಟಿನಲ್ಲಿ ಯೋಚನೆ ಮಾಡಬೇಕು.
-ಸಹನಾ ಕಾಂತಬೈಲು, ಮಡಿಕೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT