ADVERTISEMENT

ಜಲಕ್ಷಾಮದ ಪರಿಜ್ಞಾನ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2017, 19:30 IST
Last Updated 17 ಮಾರ್ಚ್ 2017, 19:30 IST

‘ಕಾಡುತ್ತಿದೆ ಭೀಕರ ಜಲಕ್ಷಾಮ ಭೀತಿ, ಎಚ್ಚೆತ್ತುಕೊಳ್ಳದಿದ್ದರೆ ಉಳಿಗಾಲವಿಲ್ಲ’ ಎಂಬ ಸಂಪಾದಕೀಯ (ಪ್ರ.ವಾ., ಮಾರ್ಚ್ 13) ಸಮಂಜಸವಾಗಿದೆ. ಮನೆ ಮನೆಗೂ ಜಲಕ್ಷಾಮದ ಬಿಸಿ ತಟ್ಟುವ ದಿನ ದೂರವಿಲ್ಲ. ಬಹಳಷ್ಟು ಜನರಿಗೆ ನೀರಿನ ಮಿತವ್ಯಯದ ಮಹತ್ವ ತಿಳಿದಿಲ್ಲ.

ಸೋರುವಿಕೆ ತಡೆಗಟ್ಟಬೇಕಾದ ಅಗತ್ಯವೂ ಮನವರಿಕೆ ಆದಂತಿಲ್ಲ. ಈ ಮಾತು ನಾನು ವಾಸಿಸುತ್ತಿರುವ ಬಹುಮಹಡಿ ಕಟ್ಟಡವೂ ಸೇರಿದಂತೆ 24x7 ನೀರು ಬಳಸುತ್ತಿರುವ ಬೆಂಗಳೂರಿನಂತಹ ನಗರದ ವಿಷಯದಲ್ಲಿ ನೂರಕ್ಕೆ ನೂರರಷ್ಟು ಸತ್ಯ.

ಮಕ್ಕಳು ಹಾಗೂ ಯುವಜನರಲ್ಲಿ ಜಲ ಸಂರಕ್ಷಣೆಯ ಬಗ್ಗೆ ಅರಿವೇ ಇಲ್ಲದಿರುವುದು ಆಘಾತದ ವಿಷಯ. ಇಂತಹ ಸಂಕಷ್ಟ ಕಾಲದಲ್ಲಿ, ‘ನೀರು ಅಮೃತ. ಅದನ್ನು ಉಳಿಸುವುದು ಒಂದು ಪವಿತ್ರ ಕಾರ್ಯ’ ಎಂದು ಎಲ್ಲರೂ ತಿಳಿಯಬೇಕಾಗಿದೆ. ಜಲ ಸಂರಕ್ಷಣೆಗಾಗಿ, ಮುಖ್ಯವಾಗಿ ಯುವಜನರನ್ನು ಒಳಗೊಂಡು ಮಹತ್ತರವಾದ ಕೆಲಸ ನಡೆಯಬೇಕಾಗಿದೆ.
–ಸಿದ್ರಾಮಪ್ಪ ದಿನ್ನಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT