ADVERTISEMENT

ಟಿಇಟಿ: ಮರು ಅವಕಾಶ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 27 ಆಗಸ್ಟ್ 2014, 19:30 IST
Last Updated 27 ಆಗಸ್ಟ್ 2014, 19:30 IST

ನಿರೀಕ್ಷಿಸಲಾಗದಷ್ಟು ಪ್ರಮಾಣದಲ್ಲಿ ಟಿಇಟಿ ಫಲಿ­ತಾಂಶ­ದಲ್ಲಿ ಕುಸಿತಕಂಡಿದ್ದು, ಒಂದೆಡೆ ಶಿಕ್ಷ­ಕರ ಆಯ್ಕೆಗೆ ಅರ್ಹತೆ ಪಡೆದವರ ಕೊರತೆ, ಎಂಟತ್ತು ವರ್ಷ­ಗಳಿಂದ ಕಾದು ಕುಳಿತು ವಯಸ್ಸು ಮೀರುತ್ತಿ­ರುವ ಅಭ್ಯರ್ಥಿಗಳಿಗೆ ಒಂದೆರಡು ಅಂಕಗಳಲ್ಲಿ ಅರ್ಹತೆ ಕೈತಪ್ಪಿ ಶಿಕ್ಷಕ ಹುದ್ದೆ ಕೈತಪ್ಪಿ­ಹೋಗಬಹು­ದಾದ  ಪರಿಸ್ಥಿತಿ ಒದಗಿದೆ.

ರಾಜ್ಯದಲ್ಲಿ ಮೊದಲಬಾರಿ ಪರೀಕ್ಷೆ ನಡೆದಿದ್ದು ಮತ್ತು ತಯಾರಿಗೆ ಸೂಕ್ತ ಮಾಹಿತಿ, ಸಮಯಾವ­ಕಾ­ಶದ ಕೊರತೆ  ಇದ್ದದ್ದು ಫಲಿ­ತಾಂಶ ಕುಸಿತಕ್ಕೆ ಕಾರಣ. ಆದ್ದರಿಂದ  ಅಭ್ಯರ್ಥಿಗಳಿಗೆ ಎರಡೂ ಪತ್ರಿಕೆ­ಗಳನ್ನು ಇನ್ನೊಂದು ಪರೀಕ್ಷೆ ಮೂಲಕ ಮತ್ತೊಮ್ಮೆ ಅವಕಾಶ ಕಲ್ಪಿಸಬೇಕು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.