ADVERTISEMENT

ತರತಮ ಸರಿಯೇ?

ಸಹನಾ ಕಾಂತಬೈಲು
Published 29 ಆಗಸ್ಟ್ 2016, 19:30 IST
Last Updated 29 ಆಗಸ್ಟ್ 2016, 19:30 IST

ಈಚೆಗೆ ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಐತಿಹಾಸಿಕ ತಾಣಗಳಿಗೆ ಭೇಟಿ ಕೊಟ್ಟಿದ್ದೆ. ಹೆಚ್ಚಿನ ಕಡೆಗಳಲ್ಲಿ ಪ್ರವೇಶ ಶುಲ್ಕ ಭಾರತೀಯರಿಗೆ ₹ 30 ಇದ್ದರೆ  ವಿದೇಶಿಯರಿಗೆ ₹ 500 ಇತ್ತು.

ಅಂದರೆ ನಮಗಿಂತ ಅವರು ಹದಿನಾರು ಪಟ್ಟು ಹೆಚ್ಚು ದುಡ್ಡು ಕೊಟ್ಟು ನೋಡಬೇಕು! ನಾನು ಕಳೆದ ವರ್ಷ ಅಮೆರಿಕ, ಸಿಂಗಪುರ ದೇಶಗಳಿಗೆ ಪ್ರವಾಸ ಹೋಗಿದ್ದೆ. ಅಲ್ಲಿ ಎಲ್ಲೂ ಇಂಥ ಇಬ್ಬಗೆಯ ನೀತಿ ಇರಲಿಲ್ಲ.

ಹೊರ ದೇಶದವರು ಅಷ್ಟು ಖರ್ಚು ಮಾಡಿಕೊಂಡು ನಮ್ಮ ದೇಶ ನೋಡಲು ಬರುತ್ತಾರೆ. ನಾವು ಅವರಿಗೆ ಇಲ್ಲಿನ ಭವ್ಯ ಸಂಸ್ಕೃತಿ, ಪರಂಪರೆಗಳನ್ನು ಹೆಮ್ಮೆಯಿಂದ ತೋರಿಸಬೇಕು.

ಎಲ್ಲರಿಗೂ ಸಮಾನ ಶುಲ್ಕ ಇಡಬೇಕು. ಅದು ಬಿಟ್ಟು ಶುಲ್ಕದಲ್ಲಿ ತರತಮ ಮಾಡಿ ‘ಅತಿಥಿ ದೇವೋಭವ’ ಎಂದು ಸಾರಿದ ನಮ್ಮ ನಾಡಿಗೆ ಅಪಚಾರ ಮಾಡುವುದು ಸರಿಯೇ? ಐತಿಹಾಸಿಕ ತಾಣಗಳನ್ನು ತೋರಿಸುವ ಗೈಡ್‌ಗಳೂ ಅಷ್ಟೆ. ವಿದೇಶಿ ಪ್ರವಾಸಿಗರಿಂದ ಮನಬಂದಂತೆ ದುಡ್ಡು ಕೀಳುತ್ತಾರೆ. ಇದಕ್ಕೆ ಏನೆನ್ನಬೇಕು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.