ADVERTISEMENT

ದಕ್ಷರನ್ನು ಉಳಿಸಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 2 ಅಕ್ಟೋಬರ್ 2015, 19:30 IST
Last Updated 2 ಅಕ್ಟೋಬರ್ 2015, 19:30 IST

ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳಿಗೆ ವರ್ಗಾವಣೆಯ ಉಡುಗೊರೆ ನೀಡುವಲ್ಲಿ ನಮ್ಮ ದೇಶದಲ್ಲಿನ ಆಳುವವರು ಬಹಳ ಮುಂದಿದ್ದಾರೆ. ಐಎಎಸ್ ಅಧಿಕಾರಿ ಅಶೋಕ ಖೇಮ್ಕಾ ನಲವತ್ತಕ್ಕೂ ಹೆಚ್ಚು ಬಾರಿ ವರ್ಗವಾಗಿದ್ದು ಬಹುಶಃ ಲಿಮ್ಕಾ ದಾಖಲೆ ಇರಬಹುದು! ಕೆಲ ದಕ್ಷ ಅಧಿಕಾರಿಗಳು ತಮ್ಮ ವೃತ್ತಿನಿಷ್ಠೆಗೆ ಗಂಟುಬಿದ್ದು ಕರ್ತವ್ಯ ನಿರ್ವಹಿಸಿ ಇನ್ನಿಲ್ಲದ ತೊಂದರೆ ಅನುಭವಿಸಿದ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ.

ಆಡಳಿತಗಾರರು, ಪ್ರಬಲ ರಾಜಕಾರಣಿಗಳ ಅಕ್ರಮಗಳನ್ನು ಬಯಲಿಗೆಳೆಯಲು ಮುಂದಾದರೆ ಎತ್ತಂಗಡಿ ಶಿಕ್ಷೆ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ. ಹೀಗಾದರೆ ಭ್ರಷ್ಟಾಚಾರ ಮುಕ್ತ ಭಾರತದ ನಿರ್ಮಾಣ ಹೇಗೆ ಸಾಧ್ಯ?

ಆಪಾದಿತರು ಯಾರೇ ಆಗಿರಲಿ ತಾವು ತಪ್ಪು ಮಾಡಿಲ್ಲವೆಂದಾದರೆ ತನಿಖೆ ಎದುರಿಸಿ ಸಾಬೀತುಪಡಿಸಬೇಕು. ಅದನ್ನು ಬಿಟ್ಟು ಅಧಿಕಾರದುರುಪಯೋಗ ಪಡಿಸಿಕೊಂಡು ಪ್ರಾಮಾಣಿಕ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿ ಸಾರ್ವಜನಿಕ ಸೇವೆಗೆ ಅಡ್ಡಿಯಾಗಬಾರದು.  ಉನ್ನತ ಅಧಿಕಾರಿಗಳಿಗೆ ಒಂದು ಸ್ಥಳದಲ್ಲಿ  ಕನಿಷ್ಠ 3 ವರ್ಷ ಸೇವೆ ಪೂರೈಸಿದ ನಂತರವೇ ವರ್ಗಾವಣೆ ಎಂಬ ನಿಯಮ ರೂಪಿಸಬೇಕು. ಆಗ ವಿವಿಧ ಇಲಾಖೆಗಳಲ್ಲಿ ಇನ್ನಷ್ಟು ಹಗರಣಗಳು ಬೆಳಕಿಗೆ ಬರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.