ADVERTISEMENT

ದೇವಳದಲ್ಲೇಕೆ ಬೇಕು?

ರಾಮಕೃಷ್ಣ ಎ.ಕೆ., ಮಂಗಳೂರು
Published 3 ಆಗಸ್ಟ್ 2015, 19:30 IST
Last Updated 3 ಆಗಸ್ಟ್ 2015, 19:30 IST

ಸಾಹಿತಿಗಳಲ್ಲಿ ಎಲ್ಲ ಧರ್ಮದವರೂ ಇರುವುದರಿಂದ ಸಾಹಿತ್ಯ ಸಮ್ಮೇಳನಗಳು ಧರ್ಮ ನಿರಪೇಕ್ಷವಾಗಿರಬೇಕಾದುದು ಅವಶ್ಯ.  ಆದರೆ ಹಲವಾರು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಕೇವಲ ವೈದಿಕ ದೇವಸ್ಥಾನಗಳ ಆವರಣದಲ್ಲಿಯೇ ಜರುಗುತ್ತಿದೆ. ಇದಕ್ಕೆ ಹಲವು ಸಾಹಿತಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೂ ಈ ವರ್ಷವೂ ಈ ತಿಂಗಳ ಕೊನೆಗೆ ಮತ್ತೆ ಕಟೀಲು ದೇವಳದೊಳಗೇ  20ನೇ ದಕ್ಷಿಣ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಇದನ್ನು ತಪ್ಪಿಸಲಾಗದೆ?

ಮೇಲಾಗಿ ಋತುಮತಿಯಾದ ಮಹಿಳಾ ಸಾಹಿತಿಗಳು, ಜನನ/ ಮರಣದ ಸೂತಕವಿರುವ ಕೆಲವು ಸಾಹಿತಿಗಳು ದೇವಸ್ಥಾನದ ಒಳಹೋಗಲು ಮುಜುಗರಪಡುತ್ತಾರೆ. ಹಾಗಾಗಿ ಸಾಹಿತ್ಯ ಸಮ್ಮೇಳನವನ್ನು ಯಾವುದೇ ಧರ್ಮದ ಪವಿತ್ರ ಸ್ಥಳ ಹೊರತುಪಡಿಸಿ ಆಯೋಜಿಸುವುದೇ ಉಚಿತ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.