ಬಡ ಹೆಣ್ಣುಮಕ್ಕಳಿಗೆ ‘ಸ್ಯಾನಿಟರಿ ಪ್ಯಾಡ್ ಭಾಗ್ಯ’ ಬಂದರೆ ಎಷ್ಟು ಚೆನ್ನ ಎಂದು ಕೆಲವರು ಕನಸು ಕಾಣುತ್ತಿದ್ದರು. ಈಗ ಆ ರಕ್ಷಕ ವಸ್ತುವಿನ ಮೇಲೆ ಗರಿಷ್ಠ ತೆರಿಗೆ ಹಾಕಿರುವುದು ಶೋಚನೀಯ! ಅವರು, ಇನ್ನು ಮೇಲೆ ಯಾವುದೋ ಕೊಳಕು ಬಟ್ಟೆಯನ್ನು ಬಳಸಿ, ಸೋಂಕು ಬರಿಸಿಕೊಂಡು, ಜೀವಾವಧಿ ನರಳುವ ಕಾಲ ಇದೀಗ ಬಂದಿದೆ.
ಈ ಜನವಿರೋಧಿ ತೀರ್ಮಾನ ತೆಗೆದುಕೊಂಡ ಸಮಿತಿಯಲ್ಲಿ ರಾಜಮನೆತನದ ಒಬ್ಬ ಸ್ತ್ರೀ ಮಾತ್ರ ಇದ್ದದ್ದೂ ಒಂದು ವಿಪರ್ಯಾಸ!
-ಡಾ. ಲೀಲಾವತಿ ದೇವದಾಸ್, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.