ADVERTISEMENT

ನಿಲುವು ಸ್ಪಷ್ಟಪಡಿಸಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 19:30 IST
Last Updated 21 ಸೆಪ್ಟೆಂಬರ್ 2017, 19:30 IST

ಮಾತೆ ಮಹಾದೇವಿ ಅವರು ಬಸವಣ್ಣನ ವಚನಾಂಕಿತವನ್ನು ‘ಲಿಂಗದೇವ’ ಎಂದು ಬದಲಾಯಿಸಿದ್ದನ್ನು ವಿರೋಧಿಸಿ ಕೆಲವು ಬಸವಾನುಯಾಯಿ ಮಠಾಧೀಶರು ಅವರೊಂದಿಗೆ ವೇದಿಕೆ ಹಂಚಿಕೊಳ್ಳುವುದನ್ನು ಬಿಟ್ಟಿದ್ದರು.

ಈಗ ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಹೋರಾಡುತ್ತಿರುವ ಸಂದರ್ಭದಲ್ಲಿ ಅದೇ ಮಠಾಧೀಶರು ಮತ್ತೆ ಅವರೊಂದಿಗೆ ಕೈ ಜೋಡಿಸಿದ್ದಾರೆ. ಅಂದರೆ, ಮಾತೆ ಮಹಾದೇವಿ ವಚನಾಂಕಿತವನ್ನು ಬದಲಾಯಿಸಿದ್ದನ್ನು ಇವರು ಒಪ್ಪಿಕೊಂಡರೇ? ಮಠಾಧೀಶರು ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ.
–ಶಿವಕುಮಾರ ಬಂಡೋಳಿ, ಸುರಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT