ADVERTISEMENT

ನ್ಯಾಯಯುತ ಬೇಡಿಕೆ

ವಿ.ಜಿ.ಇನಾಮದಾರ, ವಿಜಯಪುರ
Published 23 ಜುಲೈ 2017, 19:30 IST
Last Updated 23 ಜುಲೈ 2017, 19:30 IST

ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾದಲ್ಲಿ ಕನ್ನಡಿಗ ವಿದ್ಯಾರ್ಥಿಗಳಿಗೆ ಶೇ 50ರಷ್ಟು ಮೀಸಲಾತಿಗೆ ಅನುವಾಗಿಸುವ ರಾಜ್ಯ ಸರ್ಕಾರದ ಮಸೂದೆಗೆ ರಾಜ್ಯಪಾಲರು ರುಜು ಹಾಕಲು ನಿರಾಕರಿಸಿದ್ದು ಸರಿಯಲ್ಲ.

ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ  ಮಸೂದೆಗೆ ರಾಜ್ಯ ಸರ್ಕಾರವು  ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದಿರುವಾಗ ಸ್ಥಳೀಯರಿಗೆ ಶೇ 50ರಷ್ಟು ಮೀಸಲಾತಿ ಕಲ್ಪಿಸಿದರೆ ಕಾನೂನು ತೊಡಕಾಗುತ್ತದೆ ಎಂದು ರಾಜ್ಯಪಾಲರು ನೀಡಿದ್ದಾರೆ ಎನ್ನಲಾದ ಹೇಳಿಕೆ ಅಸಂಬದ್ಧವಾದುದು.

ಅಲ್ಲದೆ ಕಾನೂನು ವಿಶ್ವವಿದ್ಯಾಲಯಕ್ಕೆ ರಾಜ್ಯ ಸರ್ಕಾರ ಅನುದಾನ ಕಲ್ಪಿಸಿರುವುದರಿಂದ ರಾಜ್ಯದ ಬೇಡಿಕೆ ನ್ಯಾಯಸಮ್ಮತವಾಗಿದೆ ಎನ್ನಬಹುದು.
ವಿ.ಜಿ. ಇನಾಮದಾರ, ಸಾರವಾಡ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.