ADVERTISEMENT

ಪಾಸ್‌ಗಿಲ್ಲ ಬೆಲೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 19:30 IST
Last Updated 18 ಜನವರಿ 2017, 19:30 IST

ರಾಜ್ಯ ರಸ್ತೆ ಸಾರಿಗೆ ನಿಗಮಗಳು ಆರಂಭಿಸಿರುವ ವಿವಿಧ ನಮೂನೆಯ ರಿಯಾಯಿತಿ ದರದ ಬಸ್‌ ಪಾಸ್‌ ಹೊಂದಿದವರ ಬಗ್ಗೆ ಸಿಬ್ಬಂದಿಯೇ ಅಸಡ್ಡೆ ತೋರಿಸುತ್ತಾರೆ. ಕೆಲಸದ ನಿಮಿತ್ತ ದಿನನಿತ್ಯ ದೂರದ ಊರುಗಳಿಗೆ ಹೋಗಬೇಕಾದ ಉದ್ಯೋಗಿಗಳು ತಿಂಗಳ ಬಸ್‌ ಪಾಸ್ ಪಡೆದು ಸಂಚರಿಸುತ್ತಾರೆ. ಆದರೆ ಸಂಸ್ಥೆಯ ಸಿಬ್ಬಂದಿ ಮಾತ್ರ ಇಂತಹ ಪ್ರಯಾಣಿಕರಿಗೆ ಕಿಮ್ಮತ್ತಿಲ್ಲದಂತೆ ವರ್ತಿಸುತ್ತಾರೆ.

ಬಸ್ಸನ್ನು ಸರಿಯಾದ ಸಮಯಕ್ಕೆ ಓಡಿಸಿ ಎಂದು ಪಾಸ್‌ ಹೊಂದಿದ ಪ್ರಯಾಣಿಕರು ಮನವಿ ಮಾಡಿದರೆ ‘ನೀವು ಪಾಸ್‌ನವರು. ನಮಗೆ ಹಣ ಕೊಟ್ಟು ಟಿಕೆಟ್‌  ತೆಗೆದುಕೊಳ್ಳುವವರು ಬೇಕು. ಅಂತಹವರು ಹೆಚ್ಚಿನ ಸಂಖ್ಯೆಯಲ್ಲಿ ಬಂದಾಗಷ್ಟೇ ನಾವು ಬಸ್‌ ಓಡಿಸುತ್ತೇವೆ’ ಎಂದು ಒರಟಾಗಿ ಉತ್ತರಿಸುತ್ತಾರೆ. ಹಾಗಾದರೆ ಮುಂಗಡ ಹಣ ಪಾವತಿಸಿ ಪಾಸ್‌ ಪಡೆದ ಪ್ರಯಾಣಿಕರಿಗೆ ಗೌರವ ಇಲ್ಲವೇ? ಸಂಸ್ಥೆಗೆ ಅದು ದುಡಿಯುವ ಬಂಡವಾಳ ಅಲ್ಲವೇ?
-ವಿ.ಜಿ.ಇನಾಮದಾರ, ಸಾರವಾಡ, ವಿಜಯಪುರ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.