ADVERTISEMENT

​ಬಂದಿಖಾನೆ ಇಲ್ಲವೇ?

ವಾಚಕರ ವಾಣಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 19:30 IST
Last Updated 16 ಫೆಬ್ರುವರಿ 2017, 19:30 IST
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಶಶಿಕಲಾ ಮತ್ತು ಅವರ ಸಹಚರರಿಗೆ ಬೆಂಗಳೂರಿನಲ್ಲಿ ಸೆರೆವಾಸಕ್ಕೆ ವ್ಯವಸ್ಥೆ ಮಾಡುವ ಅಗತ್ಯ ಏನಿತ್ತು? ಇಡೀ ಪ್ರಕರಣದಲ್ಲಿ ಕರ್ನಾಟಕದ ಪಾತ್ರ ಇಲ್ಲ. ನ್ಯಾಯಸಮ್ಮತ ವಿಚಾರಣೆಗೆ ಅನುಕೂಲವಾಗುವಂತೆ  ಮೊಕದ್ದಮೆಯನ್ನು ಬೆಂಗಳೂರಿಗೆ ವರ್ಗಾಯಿಸಲಾಗಿತ್ತು ಅಷ್ಟೆ.
 
ಈಗ ಅಪರಾಧ ಸಾಬೀತಾದಮೇಲೂ ಅಪರಾಧಿಗಳನ್ನು ಮತ್ತೆ ಬೆಂಗಳೂರಿನ ಬಂದಿಖಾನೆಯಲ್ಲೇ ಇರಿಸಬೇಕೆನ್ನುವುದು, ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಕರ್ನಾಟಕದ ಮೇಲೆ ವಿನಾಕಾರಣ ಹೆಚ್ಚಿನ ಜವಾಬ್ದಾರಿ ಹೊರಿಸಿದಂತಾಗಿದೆ. 
 
ಪ್ರಕರಣದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಜಯಲಲಿತಾ ಅವರು ಈಗ ಬದುಕಿಲ್ಲ. ಜೊತೆಗೆ ಇತರ ಅಪರಾಧಿಗಳು ಸಾಮಾನ್ಯರೇ ಹೊರತು ಅವರಿಗೆ ಯಾವುದೇ ವಿಶೇಷ ಸ್ಥಾನಮಾನ ಇಲ್ಲ. ಹೀಗಾಗಿ ಇವರು ಸಾಮಾನ್ಯ ಕೈದಿಗಳಂತೆ ತಮಿಳುನಾಡಿನಲ್ಲೇ ಜೈಲುವಾಸ ಅನುಭವಿಸುವಂತೆ ಮಾಡುವುದು ಹೆಚ್ಚು ಸೂಕ್ತ.
–ಕೆ.ಎಸ್.ಸೋಮೇಶ್ವರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.