ADVERTISEMENT

ಬಸವ ತತ್ವದ ಸೋಲು?

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2017, 19:30 IST
Last Updated 17 ಸೆಪ್ಟೆಂಬರ್ 2017, 19:30 IST

ಶ್ರೇಷ್ಠ ಸಮಾಜ ಸುಧಾರಕ ಬಸವಣ್ಣನವರು, ಗೌತಮ ಬುದ್ಧ, ಮಹಾವೀರ ಮತ್ತು ಗುರುನಾನಕರಂತೆ ಹಿಂದೂ ನಂಬಿಕೆ ಮತ್ತು ಸಂಪ್ರದಾಯಗಳನ್ನು ಪೂರ್ಣವಾಗಿ ತ್ಯಜಿಸಿ ಪ್ರತ್ಯೇಕ ಹೊಸ ಮಾರ್ಗಗಳನ್ನು ಬೋಧಿಸಲಿಲ್ಲ.

ವೇದಾಂತವನ್ನು ತಿರಸ್ಕರಿಸಿಯೂ ಇರಲಿಲ್ಲ. ಅವರು ಶಿವನ ಅನನ್ಯ ಭಕ್ತರಾಗಿ, ಹಿಂದೂ ಧರ್ಮದ ಚೌಕಟ್ಟಿನಲ್ಲಿಯೇ ಜಾತೀಯತೆ ಮತ್ತು ಗೊಡ್ಡು ಸಂಪ್ರದಾಯಗಳ ವಿರುದ್ಧ ಹೋರಾಡಿದರು. ಮೂಲ ಧರ್ಮವನ್ನು ಮಥನಮಾಡಿ ಅಮೃತವನ್ನು ಉಣಬಡಿಸಿದರು. ನುಡಿದಂತೆ ನಡೆದರು.

‘ಛಲ ಬೇಕು ಪರ ಧರ್ಮ ಒಲ್ಲೆನೆಂಬ’ ಎಂಬ ವಚನ ಅವರ ಮೂಲ ಮಂತ್ರವಾಗಿತ್ತು. ಆದರೆ ಕಾಲಕ್ರಮೇಣ ಅವರ ಅನುಯಾಯಿಗಳು ಹಿಂದೂ ಧರ್ಮದ ಜಾತೀಯತೆಯ ನೆರಳಿನಲ್ಲಿಯೇ ಬೇರೆ ಬೇರೆ ಪಂಗಡ ಮತ್ತು ಗುಂಪುಗಳನ್ನು ಹುಟ್ಟು ಹಾಕಿದರು.

ADVERTISEMENT

ಈಗ ರಾಜಕೀಯ ಪ್ರವೃತ್ತಿಯಿಂದ ಅದು ಬೇರೆ ಧರ್ಮವೆಂದು ಪರಿಗಣಿಸಬೇಕೆಂಬ ಅಭಿಲಾಷೆಯಾದರೆ ಬಸವಣ್ಣನವರ ತತ್ವ ಮತ್ತು ಹೋರಾಟಕ್ಕೆ ಸೋಲಾಯಿತೆಂದು ಒಪ್ಪಿಕೊಂಡಂತಾಗುತ್ತದೆ.
–ಪ್ರೊ. ಎಸ್.ಆರ್.ದೇವಪ್ರಕಾಶ್, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.