ADVERTISEMENT

ಬಸ್‌ ವ್ಯವಸ್ಥೆ ಕಲ್ಪಿಸಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 2 ಮಾರ್ಚ್ 2015, 19:30 IST
Last Updated 2 ಮಾರ್ಚ್ 2015, 19:30 IST

ವಿಧಾನಸೌಧ ಬಡಾವಣೆ ಮತ್ತು ಲಕ್ಷ್ಮೀದೇವಿ ನಗರ ಪ್ರದೇಶವು ಮುಖ್ಯರಸ್ತೆಯಿಂದ ಸುಮಾರು 2 ಕಿ.ಮೀ. ಒಳಭಾಗದಲ್ಲಿದೆ. ಬೆಳಿಗ್ಗೆ 6 ರಿಂದ 8ರ ವರೆಗೆ, ಮಧ್ಯಾಹ್ನ 12.30 ರಿಂದ 3ರ ವರೆಗೆ ಮತ್ತು ರಾತ್ರಿ 8ರ ನಂತರ ಈ ಪ್ರದೇಶಕ್ಕೆ ಯಾವುದೇ ಬಿ.ಎಂ.ಟಿ.ಸಿ. ವಾಹನಗಳ ಆಗಮ ಮತ್ತು ನಿರ್ಗಮನವಾಗಲಿ ಇಲ್ಲ. ಇದರಿಂದಾಗಿ ಸ್ಥಳೀಯ ನಾಗರಿಕರು ರಾತ್ರಿ 8ರ ನಂತರ ಸೋನಲ್‌ ಗಾರ್ಮೆಂಟ್ಸ್ ಅಥವಾ ರಾಜ್‌ ಕುಮಾರ್‌ ಪುಣ್ಯ ಭೂಮಿ ಬಸ್‌ ನಿಲ್ದಾಣದಿಂದ ಬಸ್‌ ಇಳಿದು ತಮ್ಮ ಮನೆಗೆ ಹಿಂದಿರುಗಬೇಕು. ಇದು ಮಹಿಳೆರು,  ವಿದ್ಯಾರ್ಥಿಗಳು, ಹಾಗೂ  ಹಿರಿಯ ನಾಗರಿಕರಿಗೆ  ಸುರಕ್ಷಿತ ಪ್ರದೇಶವಲ್ಲ. ಈ ಮಾರ್ಗದಲ್ಲಿ (ಮಹಾಲಕ್ಷ್ಮಿ ಲೇ ಔಟ್‌ನಿಂದ ಟಿ.ವಿ.ಎಸ್‌. ಕ್ರಾಸ್‌ವರೆಗೂ) ಖಾಸಗಿ ವಾಹನಗಳಾದ ಟೆಂಪೊ ಟ್ರಾವೆಲರ್‌,  ಕ್ಯಾಬ್‌ ಮತ್ತು ಆಟೊ ರಿಕ್ಷಾ ಸಂಚಾರ ಹೆಚ್ಚಾಗಿ ಬಿ.ಎಂ.ಟಿ.ಸಿ. ನಷ್ಟ ಅನುಭವಿಸುತ್ತಿದೆ. ಸರ್ಕಾರ ಇದರ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳದೆ ಬಿ.ಎಂ.ಟಿ.ಸಿ. ಬಸ್‌ಗಳ ಸಂಚಾರ ಹಿಂಪಡೆಯುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ಬಿ.ಎಂ.ಟಿ.ಸಿ.ಯ ಉತ್ತರ ವಿಭಾಗದ ವಿಭಾಗೀಯ ನಿಯಂತ್ರಕರು, ವ್ಯವಸ್ಥಾಪಕರು (ಆಚರಣೆ) ಮುಂತಾದ ಹಿರಿಯ ಅಧಿಕಾರಿಗಳಿಗೆ ಲಿಖಿತ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.

ಲಕ್ಷ್ಮೀದೇವಿ ನಗರ ಮುಖ್ಯರಸ್ತೆಯು 40 ಅಡಿಗಿಂತ ಕಿರಿದಾಗಿದೆ. ಅದಕ್ಕಾಗಿ ಬಿ.ಎಂ.ಟಿಸಿ. 30  ಆಸನಗಳುಳ್ಳ, ಉದ್ದ ಕಡಿಮೆ ಇರುವ ವಾಹನಗಳನ್ನು ಈ ರಸ್ತೆಯಲ್ಲಿ ಸಂಚರಿಸುವಂತೆ ಮಾಡಲು ಕ್ರಮ ಕೈಗೊಳ್ಳಬೇಕು. ರಾತ್ರಿ 10 ಗಂಟೆಯವರೆಗೆ ವಾಹನಗಳು ಸಂಚರಿಸುವಂತೆ ಮಾಡಲು ಬಿ.ಎಂ.ಟಿ.ಸಿ. ಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ಜನರಲ್‌ ಮ್ಯಾನೇಜರ್‌ (ಆಚರಣೆ) ಇವರಿಗೆ ನಿರ್ದೇಶನ ನೀಡಬೇಕಾಗಿ ವಿನಂತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.