ADVERTISEMENT

ಬುಲೆಟ್ ಟ್ರೇನ್ ಅಗತ್ಯವೇ?

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2017, 19:30 IST
Last Updated 16 ಮಾರ್ಚ್ 2017, 19:30 IST

ಮುಂಬೈನಿಂದ ಅಹಮದಾಬಾದ್‌ವರೆಗೆ ₹ 97.6 ಸಾವಿರ ಕೋಟಿ ಖರ್ಚು ಮಾಡಿ ಬುಲೆಟ್ ಟ್ರೇನ್ ಓಡಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಎಷ್ಟೇ ರಿಯಾಯಿತಿ ಕೊಟ್ಟರೂ ಹಾಕಿದ ಬಂಡವಾಳಕ್ಕೆ ಅನುಗುಣವಾಗಿ ಪ್ರಯಾಣ ದರವನ್ನು ನಿಗದಿ ಮಾಡಲೇಬೇಕಾಗುತ್ತದೆ.

ಆಗ ಬಹುಶಃ ಈ ಬುಲೆಟ್ ರೈಲು ಪ್ರಯಾಣ ದರವು ವಿಮಾನ ದರಗಳ ಹತ್ತಿರವೇ ಇರುವ ಸಂಭವ ಇದೆ. ಇಷ್ಟೊಂದು ಹಣ ಖರ್ಚು ಮಾಡಿ ರೈಲು ಮಾರ್ಗ ನಿರ್ಮಿಸುವ ಬದಲು, ಕಡಿಮೆ ದರದಲ್ಲಿ ವಿಮಾನಯಾನ ಸೇವೆ ಕಲ್ಪಿಸುವುದಕ್ಕೆ ಆದ್ಯತೆ ನೀಡಿದಲ್ಲಿ ಶ್ರಮ, ಹಣ ಉಳಿತಾಯವಾಗುತ್ತದೆ.

ಬಾಹ್ಯಾಕಾಶಕ್ಕೆ ಗಗನಯಾನಿಗಳನ್ನು ಕಳುಹಿಸಲು ಇಸ್ರೊ ₹ 12,500 ಕೋಟಿ ಅನುದಾನ ಕೇಳಿದ್ದಕ್ಕೆ ಪ್ರಧಾನಿಯವರ ಕಚೇರಿ, ಇದರಿಂದ ಏನು ಉಪಯೋಗ ಎಂದು ಪ್ರಶ್ನೆ ಮಾಡಿದೆಯೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹಾಗಾದರೆ ಈ ಬುಲೆಟ್ ರೈಲು ಯಾರಿಗೆ? ಇದರಿಂದ ಎಷ್ಟು ಜನರಿಗೆ ಉಪಯೋಗವಾಗುತ್ತದೆ? ಆದ್ಯತೆಗಳ ವಿಮರ್ಶೆಗೆ ಇದು ಸೂಕ್ತ ಕಾಲ. 
-ಡಾ. ಚನ್ನು ಅ. ಹಿರೇಮಠ, ರಾಣೆಬೆನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT