ADVERTISEMENT

ಭಾಷಾ ಸೂತ್ರ ಬೇಕು

ಸತ್ಯಬೋಧ, ಬೆಂಗಳೂರು
Published 5 ಅಕ್ಟೋಬರ್ 2015, 19:34 IST
Last Updated 5 ಅಕ್ಟೋಬರ್ 2015, 19:34 IST

ಕೆಪಿಟಿಸಿಎಲ್ 995 ಎಂಜಿನಿಯರಿಂಗ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಯ್ಕೆಗೆ ಕನ್ನಡವನ್ನು ಕಡ್ಡಾಯ ಮಾಡಿಲ್ಲ. ಹೀಗಾಗಿ ಇಲ್ಲಿ ಕನ್ನಡಿಗ ಎಂಜಿನಿಯರುಗಳು ಆಯ್ಕೆಯಾಗುವುದು ಕಠಿಣವಾಗಿದೆ. ಏಕೆಂದರೆ ಅನ್ಯಭಾಷಿಕರಿಗೆ ಹುದ್ದೆಯನ್ನು ಕೊಳ್ಳುವ ಸಾಮರ್ಥ್ಯ ಇದೆ.

ಪಂಜಾಬ್, ಮಹಾರಾಷ್ಟ್ರ ವಿದ್ಯುತ್ ಕಂಪೆನಿಗಳಿಗೆ ನಡೆದ ನೇಮಕಾತಿಯಲ್ಲಿ ಅಲ್ಲಿಯ ಭಾಷಾ ಜ್ಞಾನ ಕಡ್ಡಾಯ ಮಾಡಲಾಗಿತ್ತು. ಹೀಗಿರುವಾಗ ಕೆಪಿಟಿಸಿಎಲ್‌ ಏಕೆ ಈ ಸೂತ್ರ ಅನ್ವಯಿಸದೆ, ಗುಣಮಟ್ಟದ ಹೆಸರಲ್ಲಿ ಕನ್ನಡಿಗ ಎಂಜಿನಿಯರುಗಳನ್ನು ನಿರುದ್ಯೋಗಿಗಳನ್ನಾಗಿ ಮಾಡುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.