ADVERTISEMENT

ಮರಗಳ ಹನನ ನಿಲ್ಲಲಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 19:30 IST
Last Updated 19 ಜನವರಿ 2017, 19:30 IST

ಭೂಬಿಸಿ ಏರುತ್ತಿದೆ, ವಾಯುಮಾಲಿನ್ಯ ಏರುತ್ತಿದೆ ಎಂಬೆಲ್ಲಾ ಕೂಗಿನ ಮಧ್ಯೆ, ನಮ್ಮ ಅರಣ್ಯ ಇಲಾಖೆ ಚಿಕ್ಕಮಗಳೂರು ಜಿಲ್ಲೆಯ ನೆಡುತೋಪು ಮತ್ತು ಮೀಸಲು ಅರಣ್ಯದಲ್ಲಿರುವ ಸುಮಾರು 50 ಸಾವಿರ ಮರಗಳನ್ನು ಕಡಿಯಲು ಮುಂದಾಗಿದೆ (ಪ್ರ.ವಾ., ಜ. 18). ಅದಕ್ಕೆ ಇಲಾಖೆ ‘ಹೆಚ್ಚೇನಿಲ್ಲ, 7- 8 ಸಾವಿರ ಮರ ಹೋಗಬಹುದು ಅಷ್ಟೆ...’ ಎಂದು ಸಬೂಬು ನೀಡಿದೆ!

ಬಿಸಿಲಿನಲ್ಲಿ ಜನ- ಜಾನುವಾರು, ವಾಹನಗಳು, ಗೂಡಂಗಡಿಗಳು ಎಲ್ಲದಕ್ಕೂ ಮರದ ನೆರಳು ಬೇಕೇಬೇಕು. ಮರಗಳ ಇಂತಹ ನೂರಾರು ಉಪಯೋಗಗಳಿಗಿಂತ ಅವು ಉಂಟುಮಾಡುವ ಅನನುಕೂಲಗಳೇ ಅಧಿಕಾರಿಗಳಿಗೆ ಎದ್ದುತೋರುತ್ತವೆ! ಮರಗಳನ್ನು ಕಡಿಯದೆ ಹಾಗೇ ಉಳಿಸಿಕೊಂಡು ಅಭಿವೃದ್ಧಿ ಕಾರ್ಯಗಳನ್ನೂ ನಡೆಸಿಕೊಂಡು ಹೋಗುವಂತಹ ತಂತ್ರಜ್ಞಾನ ನಮ್ಮಲ್ಲಿ ಇಲ್ಲವೇ?
-ಸರೋಜಾ ಪ್ರಕಾಶ, ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.