ADVERTISEMENT

ಮರೆಯೋಣ ಎಂಬುದು...

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 19:30 IST
Last Updated 22 ಮಾರ್ಚ್ 2018, 19:30 IST

ಇತಿಹಾಸದಲ್ಲಿ ನಾನಾ ವಿಧವಾದ ದುರ್ಘಟನೆಗಳು ನಡೆದುಹೋಗಿವೆ. ಬೇರೊಂದು ರೂಪದಲ್ಲಿ ಈಗಲೂ ನಡೆಯುತ್ತಿವೆ. ಆದರೆ ಅವುಗಳನ್ನು ಗಾಢವಾಗಿ ಅರಿಯದೆ; ಮಾನವೀಯ ಸಂಬಂಧಗಳನ್ನು ದಟ್ಟಗೊಳಿಸಿಕೊಳ್ಳಲು ಸಾಧ್ಯವಿಲ್ಲ. ‘ಮರೆತು ಮುನ್ನಡೆಯೋಣ’ ಎಂಬುದೂ ಅರಿವಿ‌ನ ಮುಂದುವರಿದ ಭಾಗವಾಗಿಯೇ ಬರಬೇಕಾಗುತ್ತದೆ. ಗಿರೀಶ್ ವಿ.ವಾಘ್ ಅವರು ಅನ್ಯಥಾ ಭಾವಿಸಬಾರದು; ಸೂರ್ಯಪ್ರಕಾಶ್ ಅವರ ಎಲ್ಲಾ ಲೇಖನಗಳಲ್ಲಿ ಪರೋಕ್ಷ

ವಾಗಿ ಎದ್ದುಕಾಣುವುದು ಪ್ರಚೋದನೆಯೇ. ಅಲ್ಲಿ ಸಾಮರಸ್ಯ, ಸಹನಾಮಯತೆ ಎದ್ದುಕಾಣುವುದಿಲ್ಲ. ಆದ್ದರಿಂದ ‘ಅಸ್ಮಿತೆ’ಗಳನ್ನು ಪಕ್ಕಕ್ಕೆ ಸರಿಸಿ ಹೋದಂತೆಲ್ಲ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಆಸ್ವಾದಿಸಲು ಸಾಧ್ಯವಿಲ್ಲ.

-ಶೂದ್ರ ಶ್ರೀನಿವಾಸ್, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.