ADVERTISEMENT

ಮಲಗಿದಂತೆ ನಟಿಸುತ್ತಿರುವ ಆದಾಯ ತೆರಿಗೆ ಇಲಾಖೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 20 ಏಪ್ರಿಲ್ 2014, 19:30 IST
Last Updated 20 ಏಪ್ರಿಲ್ 2014, 19:30 IST

ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ಘೋಷಿಸಿ­ಕೊಳ್ಳುತ್ತಿರುವ ಆಸ್ತಿಯ ವಿವರ ಎಂಥವ­ರನ್ನೂ ಬೆಚ್ಚಿಬೀಳಿಸದಿರದು.  ಕೆಲವೇ ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತಿರುವ ಹಣ, ಆಸ್ತಿ ಎಲ್ಲಿಂದ ಬಂತು? ಗಂಡನಿಗಿಂತಲೂ ಅಧಿಕ ಆದಾಯ ಹೊಂದಿರುವ ರಾಜಕೀಯ ಧುರೀಣರ ಹೆಂಡತಿಯರು ಮನೆಯಲ್ಲೇ ಕುಳಿತು ಯಾವ ಕೆಲಸ ಮಾಡಿ ಕೋಟಿಗಟ್ಟಲೆ ಹಣ ಸಂಪಾದಿಸಿದ್ದಾರೆ? ಇವುಗಳನ್ನು ಭೇದಿಸಲು ಆದಾಯ ತೆರಿಗೆ ಇಲಾಖೆಗೆ ಧೈರ್ಯ ಇಲ್ಲವೇ?

ಮಲಗಿದಂತಿದ್ದ ಚುನಾವಣಾ ಆಯೋಗಕ್ಕೆ ಕಾಯಕಲ್ಪ ನೀಡಿದ ಟಿ.ಎನ್‌. ಶೇಷನ್‌ ಅವರಂಥ ಅಧಿಕಾರಿಗಳು ಆದಾಯ ತೆರಿಗೆ ಇಲಾಖೆಗೆ ಬರಬೇಕಿದೆ. ಭ್ರಷ್ಟಾಚಾರದಿಂದ ಬೇಸತ್ತು ಜನ ದಂಗೆ ಏಳುವ ಕಾಲ ಸಮೀಪಿಸುವ ಮೊದಲು ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಳ್ಳಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.