ADVERTISEMENT

ಮುಕ್ತ ಚರ್ಚೆ ನಡೆಯಬೇಕಿದೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2016, 19:30 IST
Last Updated 24 ಅಕ್ಟೋಬರ್ 2016, 19:30 IST

ರಾಯಚೂರಿನಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ನಾಡಿನ ನೆಲ, ಜಲ ಹಾಗೂ ಶಿಕ್ಷಣದ ಸವಾಲುಗಳ ಬಗ್ಗೆ ಮುಕ್ತವಾದ ಚರ್ಚೆ ಆಗಬೇಕಿದೆ. ರಾಜ್ಯ ಹಲವಾರು ಜಲ ವಿವಾದಗಳನ್ನು ಎದುರಿಸುತ್ತಿದೆ.

ಮುಖ್ಯವಾಗಿ ಉತ್ತರ ಕರ್ನಾಟಕದ ಜನರ ಕೂಗಾದ ಮಹಾದಾಯಿ ನದಿ ತಿರುವು ಯೋಜನೆ ಜಾರಿ ಕುರಿತು ಮುಂದಿನ ಹೋರಾಟದ ಬಗ್ಗೆ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ. ಕಾವೇರಿ ನದಿ ನೀರು ಹಂಚಿಕೆಯ ಕಾನೂನಿನ ಸವಾಲುಗಳ ಕುರಿತು ಚರ್ಚಿಸಬೇಕಿದೆ.

ನಾಡಿನ ಭಾಷೆ, ಭೌಗೋಳಿಕತೆ ಹಾಗೂ ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಇರುವ ಹಲವಾರು ಸಮಸ್ಯೆಗಳಿಗೆ ಅಭಿವೃದ್ಧಿಯ ಮಾರ್ಗಗಳನ್ನು ಕಂಡುಕೊಳ್ಳುವ ಬಗ್ಗೆ ಮುಕ್ತವಾದ ಚರ್ಚೆಯಾಗಲಿ.
-ಶಿವಮಲ್ಲಯ್ಯ ಬನ್ನಿಗನೂರು, ಸಿಂಧನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.