ADVERTISEMENT

ಮುದುಕರಾಗುವುದೇ ಇಲ್ಲವೆ?

ಎಚ್.ಆನಂದರಾಮ ಶಾಸ್ತ್ರೀ
Published 29 ಸೆಪ್ಟೆಂಬರ್ 2014, 19:30 IST
Last Updated 29 ಸೆಪ್ಟೆಂಬರ್ 2014, 19:30 IST

ಹಿರಿಯ ನಾಗರಿಕರಿಗೆ ಲಭ್ಯವಿರುವ (ಅ)ವ್ಯವಸ್ಥೆಗಳ ಬಗ್ಗೆ ಪ್ರಕಟವಾಗಿರುವ ಎರಡು ಪತ್ರಗಳಿಗೆ ಪೂರಕವಾಗಿ (ವಾ.ವಾ., ಸೆ. 15, 26) ಈ ಪತ್ರ.
ಒಮ್ಮೆ, ಬೆಂಗಳೂರಿನ ಬಿ.ಟಿ.ಎಂ. ಬಡಾವಣೆಯ ಮುಖ್ಯರಸ್ತೆಯೊಂದ ರಲ್ಲಿ ಸಿಗ್ನಲ್‌, ಪೊಲೀಸ್‌, ಹೋಂ ಗಾರ್ಡ್ ಯಾವ ವ್ಯವಸ್ಥೆಯೂ ಇಲ್ಲದ ಕೂಡು ರಸ್ತೆಯನ್ನು ನಾನೂ ಇನ್ನೊಬ್ಬ ವೃದ್ಧರೂ ದಾಟುತ್ತಿದ್ದೆವು. ದೂರದಿಂದ ಅತಿ ವೇಗವಾಗಿ ಧಾವಿಸಿದ ಕಾರೊಂದು ನಮ್ಮನ್ನು ಮುತ್ತಿಕ್ಕಿದ ಅಂತರದಲ್ಲಿ ನಿಂತಿತು. ಎದೆಯೇ ಕೈಗೆ ಬಂದ ಹಾಗಾಯ್ತು. ‘ಸ್ವಲ್ಪ ನಿಧಾನವಾಗಿ ಬರ ಬಹುದಿತ್ತಲ್ಲಪ್ಪಾ’, ಎಂದು ಆ ವೃದ್ಧರು ದೈನ್ಯತೆಯಿಂದ ಆ ಕಾರಿನ ಮಾಲೀಕನೂ ಚಾಲಕನೂ ಆಗಿದ್ದ ವಿದ್ಯಾವಂತನಿಗೆ ಹೇಳಿದಾಗ ಆತ, ‘ಏನ್‌ ಮಾಡ್ಬೇಕೀಗ?!’ ಎಂದು ಆ ವೃದ್ಧರನ್ನು ಗದರಿಸಿದ. ಆತ ನಿಗೆ ನಾವಿಬ್ಬರೂ ತಿಳಿ ಹೇಳಲು ಹೊರ ಟರೆ ಕಣ್ಣು ಕೆಕ್ಕರಿಸಿ ಗಟ್ಟಿ ದನಿಯಲ್ಲಿ ಅರ ಚುತ್ತ ನಮಗೆ ಧಮಕಿ ಹಾಕತೊಡಗಿದ! ಈ ಅಸಡ್ಡಾಳರೆಲ್ಲ ಬಹುಶಃ ಮುದುಕ­­­­ರಾಗುವುದೇ ಇಲ್ಲವೇನೋ!?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.