ADVERTISEMENT

ಮೌಢ್ಯತೆಯ ಮಡುವಲ್ಲಿ

ಶ್ರೀನಿವಾಸ ರಾಂಪುರ, ಚನ್ನಪಟ್ಟಣ
Published 22 ಜುಲೈ 2014, 19:30 IST
Last Updated 22 ಜುಲೈ 2014, 19:30 IST

ನಂಬಿಕೆ ಇರಬೇಕು, ಮೂಢನಂಬಿಕೆ ಇರಬಾರದು. ಶಾಸ್ತ್ರ, ಸಂಪ್ರದಾಯ ಇವುಗಳೆಲ್ಲ ಅತಿಯಾಗ­ಬಾರದು. ದೇವರನ್ನು ನಂಬು. ಅದೇ ದೇವರು ಬಂದಿದೆ ಎನ್ನುವ ಮಾನವನನ್ನು ನಂಬಬೇಡ.

ನನ್ನ ಮೇಲೆ ಆ ದೇವರು ಬರುತ್ತೆ. ಈ ದೇವರು ಬರುತ್ತೆ ಎಂದು ನಾಟಕವಾಡಿ ಅಮಾಯಕ ಜನರನ್ನು ತನ್ನತ್ತ ಸೆಳೆದು ಮೋಸ ಮಾಡುತ್ತಿರು­ವವರು ಬೇಕಾದಷ್ಟು ಜನರು ಇದ್ದಾರೆ.

ದೇವರು ಮನುಷ್ಯನ ಮೇಲೆ ಬರುವ ಹಾಗಿದ್ದರೆ ದೇವಸ್ಥಾನಗಳು, ಗುಡಿ-ಗೋಪುರಗಳೆಲ್ಲ ಮುಚ್ಚಿ ಹೋಗು­ತ್ತಿದ್ದವು. ಮಾಧ್ಯಮಗಳಲ್ಲಿ  ವಾಮಾಚಾರ, ಭಾನಾಮತಿ ಮುಂತಾದ ಆಚಾರಗಳ ಬಗ್ಗೆ ಓದು­ತ್ತೇವೆ, ನೋಡುತ್ತೇವೆ. ಅವುಗಳ ತಡೆ­ಯುವ, ನಿಲ್ಲಿಸುವ ಪ್ರಯತ್ನಕ್ಕೆ ಕೈ ಹಾಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.