ADVERTISEMENT

ಮೌಢ್ಯದ ಪರಮಾವಧಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 17 ಏಪ್ರಿಲ್ 2014, 19:30 IST
Last Updated 17 ಏಪ್ರಿಲ್ 2014, 19:30 IST

ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿ­ಗಳು ತಮ್ಮ ತಮ್ಮ ಜ್ಯೋತಿಷಿಗಳ ಸಲಹೆಯಂತೆ ನಿರ್ದಿಷ್ಟ ಮುಹೂರ್ತದಲ್ಲಿ ನಾಮಪತ್ರ ಸಲ್ಲಿಸುವುದು ಸಾಮಾನ್ಯ. ಗುರುವಾರ ನಡೆದ ಚುನಾವಣೆಯ ಸಂದರ್ಭದಲ್ಲಿ  ಕೇಂದ್ರದ ಸಚಿವ­ರೊಬ್ಬರು ವಾಸ್ತು ಪ್ರಕಾರ ಮತ­ಯಂತ್ರದ ದಿಕ್ಕನ್ನು ಬದಲಿಸಿ ಮತ ಚಲಾಯಿಸಿ­ರುವುದು ಮೌಢ್ಯದ ಪರಮಾವಧಿ.

ಸಚಿವರ ಕೋರಿಕೆಯಂತೆ ಮತಯಂತ್ರ ಇರಿಸಿದ ಟೇಬಲನ್ನು ಸರಿಸಲು ಸಹಕರಿಸಿದ ಸಿಬ್ಬಂದಿಯನ್ನು ಚುನಾವಣಾ ಅಧಿಕಾರಿ ತರಾಟೆಗೆ ತೆಗೆದುಕೊಂಡಿರುವುದು ಸರಿಯಾ­ದುದು. ಮೂಢನಂಬಿಕೆ ವಿರೋಧಿ ಕಾನೂನು ಜಾರಿಗೊಳಿಸಲು ಚಿಂತಿಸುತ್ತಿರುವ ಆಡಳಿತಾ­ರೂಢ ಪಕ್ಷಕ್ಕೆ ಸೇರಿದ ಅಭ್ಯರ್ಥಿಯ ವರ್ತನೆ ಖಂಡನೀಯ. ರಾಜಕಾರಣಿಗಳು ತಮ್ಮ ಗ್ರಹಗತಿಗೆ ಸಂಬಂಧಿಸಿ ಸಾರ್ವಜನಿಕ ಆಸ್ತಿ ವಿರೂಪ­ಗೊಳಿಸು­ವುದು ನಿಲ್ಲಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.