ADVERTISEMENT

ರಜೆಯ ಔಚಿತ್ಯ...

ಎನ್‌.ಸಿ.ಸುಂದರರಾಜ ರಾವ್‌, ಬೆಂಗಳೂರು
Published 29 ಮೇ 2015, 19:30 IST
Last Updated 29 ಮೇ 2015, 19:30 IST

ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವಕ್ಕೆ ಮಾತ್ರ ಸರ್ಕಾರಿ ರಜೆ ನೀಡಬೇಕು ಎಂದು ಜ.ಹೊ. ನಾರಾಯಣಸ್ವಾಮಿ ನೀಡಿರುವ ಸಲಹೆ (ವಾ.ವಾ., ಮೇ 27) ಪರಿಶೀಲನಾಯೋಗ್ಯ. ಮೇರು ಪುರುಷರ ಹುಟ್ಟುಹಬ್ಬಕ್ಕೆ ರಜೆ ಘೋಷಣೆ ಮಾಡುವುದರಿಂದ ಸಾಧಿಸುವುದು ಏನೂ ಇಲ್ಲ. ಅದರ ಬದಲು ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಅವರ ಜಯಂತಿಯನ್ನು ಸಾರ್ಥಕಗೊಳಿಸುವುದು ಉಚಿತ.

ಮಹನೀಯರ ಜಯಂತಿ ದಿನ ಶಾಲಾ–ಕಾಲೇಜು, ಸರ್ಕಾರಿ ಕಚೇರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಾಂಕೇತಿಕ ರೀತಿಯಲ್ಲಿ ಗೌರವ ಸೂಚಿಸಬಹುದು. ಅವರ ಬದುಕು–ಸಾಧನೆ ಕುರಿತು ಚುಟುಕು ಉಪನ್ಯಾಸಕ್ಕೆ ಅವಕಾಶ ಕಲ್ಪಿಸಬಹುದು. ಆದರೆ ಅದಕ್ಕಾಗಿ ಇಡೀ ದಿನ ರಜೆ ಘೋಷಿಸುವುದು ಸರಿಯಲ್ಲ. ಸಮಯ, ಸಂಪನ್ಮೂಲ ಹಾಳು ಮಾಡುವಂಥ ರಜೆಗಳು ಬೇಡವೇ ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.