ADVERTISEMENT

ರೈಲ್ವೆ ಯೋಜನೆ ಬೇಡ

​ಪ್ರಜಾವಾಣಿ ವಾರ್ತೆ
Published 23 ಮೇ 2017, 19:30 IST
Last Updated 23 ಮೇ 2017, 19:30 IST
ಹುಬ್ಬಳ್ಳಿ– ಅಂಕೋಲಾ ರೈಲ್ವೆ ಯೋಜನೆ ಕುರಿತಂತೆ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ಲೇಖನ ಸರಣಿ ಪ್ರಜ್ಞಾವಂತರು ಮತ್ತು ವಿವೇಕಿಗಳ ಕಣ್ಣು ತೆರೆಸುವಂತಿದೆ. 
 
ಯೋಜನೆ ಜಾರಿಗೆ ಎರಡು ಲಕ್ಷಕ್ಕೂ ಹೆಚ್ಚು ಮರಗಳು ಬಲಿಯಾಗುವುದರ ಜೊತೆಗೆ ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶವಾಗುತ್ತದೆ.  ಪ್ರಾಣಿಗಳ ನೆಲೆಯೂ ತೊಂದರೆಗೆ ಒಳಗಾಗುತ್ತದೆ. 
 
ಪರಿಸರವಾದಿ ಪಾಂಡುರಂಗ ಹೆಗಡೆ ಅವರು ಹೇಳಿರುವಂತೆ ಈ ಯೋಜನೆ  ಪ್ರಾಯೋಗಿಕವಲ್ಲ ಎನ್ನುವುದು ನೂರಕ್ಕೆ ನೂರರಷ್ಟು ಸತ್ಯ.  ಯಾವುದೇ ದೃಷ್ಟಿಯಿಂದ ನೋಡಿದರೂ ಇದನ್ನು ಕೈಬಿಡುವುದೇ ಸೂಕ್ತ.  ಇಲ್ಲದಿದ್ದಲ್ಲಿ ಖಂಡಿತವಾಗಿಯೂ ಕರ್ನಾಟಕ ಮರುಭೂಮಿಯಾಗುವ ದಿನ ದೂರವಿಲ್ಲ.  
ಡಿ.ವಿ. ಹೆಗಡೆ, ಬೆಂಗಳೂರು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.