ADVERTISEMENT

ಲೇವಡಿ ಬೇಡ

ಹರೀಶ್ ಎಂ.ರಾವ್, ಬೆಂಗಳೂರು
Published 28 ಜುಲೈ 2015, 19:30 IST
Last Updated 28 ಜುಲೈ 2015, 19:30 IST

ಕನ್ನಡ ಸಿನಿಮಾ ಮತ್ತು ಕನ್ನಡ ಟಿ.ವಿ. ವಾಹಿನಿಗಳಲ್ಲಿ ಕನ್ನಡಿಗರೇ ಕನ್ನಡಿಗರನ್ನು ಲೇವಡಿ ಮಾಡುವ ಪ್ರವೃತ್ತಿ ಬೆಳೆಯುತ್ತಿದೆ. ಇಲ್ಲಿ ಕರಾವಳಿಯವರನ್ನು ಹಾಗೂ ಉತ್ತರ ಕರ್ನಾಟಕದವರನ್ನು ಬಫೂನ್‌ಗಳಂತೆ ತೋರಿಸುತ್ತಾರೆ. ಜತೆಗೆ ‘ಓಹ್ ನೀವು ಮಂಗಳೂರಿನವರಲ್ಲವೇ? ನಿಮ್ಮ ಮೀನಿನ ವಾಸನೆಯಿಂದಲೇ ಗೊತ್ತಾಯಿತು ಬಿಡಿ’ ಎನ್ನುವ ಬಾಲಿಶ ಸಂಭಾಷಣೆ ಅಥವಾ ‘ಎಂತಾ ಮಾರಾಯ ಮಂಡೆ ಬೆಚ್ಚ ಉಂಟಾ’ ಎಂಬ ಪರಿಹಾಸ್ಯದ ಸಂಭಾಷಣೆ ಇರುತ್ತದೆ. ರಿಯಾಲಿಟಿ ಶೋಗಳಲ್ಲೂ ಕರಾವಳಿ ಕನ್ನಡವನ್ನು ತಮಾಷೆ ಮಾಡಲಾಗುತ್ತದೆ. ಕರಾವಳಿ ಕನ್ನಡದಂಥ ಶುದ್ಧ ಗ್ರಾಂಥಿಕ ಕನ್ನಡವೂ ಪರಿಹಾಸ್ಯದ ಭಾಷೆಯಾಗುವುದು ವಿಪರ್ಯಾಸ.  ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಹಳೆ ಮೈಸೂರು ಕನ್ನಡ ಮಾತನಾಡುವವರು ಕೇವಲ ಶೇ 35ರಷ್ಟು ಮಂದಿ. ಆದರೂ ಎಲ್ಲ ಸಿನಿಮಾ  ಮತ್ತು ಟಿ.ವಿ. ಧಾರಾವಾಹಿಗಳಲ್ಲಿ ಮೈಸೂರು ಕನ್ನಡಕ್ಕೇ ಪ್ರಾಶಸ್ತ್ಯ.

ರಾಜ್ಯದ ಜನಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚು ಜನ ಉತ್ತರ ಕರ್ನಾಟಕದ ಕನ್ನಡ ಮಾತನಾಡುತ್ತಾರೆ. ಆದರೂ ಅವರನ್ನು ಯಾವಾಗಲೂ ದಡ್ದರು, ಒರಟರು ಎಂಬಂತೆ ತೋರಿಸಲಾಗುತ್ತದೆ. ಹೀಗೆ ಕನ್ನಡಿಗರೇ ಕನ್ನಡಿಗರನ್ನು ಅಪಹಾಸ್ಯ ಮಾಡಿ ಅವಮಾನಿಸುವುದು ಮೊದಲು ನಿಲ್ಲಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.