ADVERTISEMENT

ವಸೂಲಿಯೂ ಇದೆ!

​ಪ್ರಜಾವಾಣಿ ವಾರ್ತೆ
Published 17 ಜೂನ್ 2018, 17:08 IST
Last Updated 17 ಜೂನ್ 2018, 17:08 IST

‘ಎನ್‌ಪಿಎ: ₹ 1.20 ಲಕ್ಷ ಕೋಟಿ ವಜಾ’ (ಪ್ರ.ವಾ.,ಜೂನ್‌ 16) ಸುದ್ದಿಯಲ್ಲಿ ಹೇಳಿರುವಂತೆ ‘ವಜಾ’ ಎಂದರೆ, ಬ್ಯಾಂಕ್‌ನ ಲಾಭದಲ್ಲಿ ಕಡಿತಗೊಳಿಸಿದ ಹಣ (provisioning) ಎಂಬುದು ನಿಜವಾದರೂ, ಅದನ್ನು ವಸೂಲಿ ಮಾಡುವ ಯತ್ನಗಳು ಮುಂದುವರಿಯುತ್ತವೆ. ಲಾಯರ್ ನೋಟಿಸ್, ಕೋರ್ಟ್ ದಾವೆ, ಆಸ್ತಿ ಹರಾಜು– ಮಾರಾಟ... ಇತ್ಯಾದಿ ಪ್ರಕ್ರಿಯೆಗಳು ಮುಂದೆಯೂ ನಡೆಯುತ್ತವೆ. ಅಲ್ಲಿಂದ ಮುಂದೆ ವಸೂಲಾಗುವ ಪ್ರತಿ ಪೈಸೆಯೂ ನೇರವಾಗಿ ಬ್ಯಾಂಕ್‌ನ ಲಾಭಕ್ಕೆ ಸೇರುತ್ತದೆ.

ಇತ್ತೀಚೆಗೆ ಭೂಷಣ್ ಸ್ಟೀಲ್ ಕಂಪನಿಯಿಂದ ವಸೂಲಿ ಮಾಡಿದ ಸುಮಾರು ₹ 8,600 ಕೋಟಿ ಹಣ ನೇರವಾಗಿ ಎಸ್‌ಬಿಐ ನ ಲಾಭಕ್ಕೆ ಜಮೆ ಆಗಿದೆ‌. ಮಲ್ಯ ಆಗಿರಲಿ, ಮೋದಿ ಆಗಿರಲಿ ಸಾಲ ವಸೂಲಿ ಪ್ರಕ್ರಿಯೆಯಂತೂ ನಿರಂತರವಾಗಿ ಸಾಗುತ್ತದೆ.

ಇಲ್ಲಿ ಇನ್ನೂಂದು ವಿಷಯ ಇದೆ. ಕೈಯಲ್ಲಿ ಹಣ ಇದ್ದು, ಸಾಲ ಮರುಪಾವತಿ ಮಾಡುವ ಶಕ್ತಿ ಇರುವ ಗ್ರಾಹಕರೂ ಇತ್ತೀಚೆಗೆ ‘ವಿಲ್‌ಫುಲ್ ಡಿಫಾಲ್ಟರ್’ ಗಳಾಗುತ್ತಿದ್ದಾರೆ. ಇಂಥವರನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಕ್ರಿಯಾತ್ಮಕ ಯೋಜನೆ ರೂಪಿಸಿ ಜಾರಿಗೆ ತಂದಲ್ಲಿ, ವಜಾ ಆದ ಲಕ್ಷ ಕೋಟಿ ವಸೂಲಿ ಆಗುವುದರಲ್ಲಿ ಸಂದೇಹವಿಲ್ಲ.

ADVERTISEMENT

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಮರುಪಾವತಿಯ ಸಾಮರ್ಥ್ಯ ಹೊಂದಿರುವ ಸಾಲಗಾರರನ್ನು ಸಾಲಮನ್ನಾ ಪಟ್ಟಿಯಿಂದ ಕೈಬಿಡಲು ಯೋಚಿಸಿರುವುದು ಸ್ವಾಗತಾರ್ಹ.
-ಶ್ರೀನಿವಾಸ್ ಕೆ.ವಿ., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.