ADVERTISEMENT

ವಿರೋಧ ಏಕೆ?

​ಪ್ರಜಾವಾಣಿ ವಾರ್ತೆ
Published 26 ಜುಲೈ 2017, 19:30 IST
Last Updated 26 ಜುಲೈ 2017, 19:30 IST

ಲೋಕಸಭೆಯಲ್ಲಿ ‘ಬ್ಯಾಂಕಿಂಗ್ ನಿಯಂತ್ರಣ ಮಸೂದೆ’ ಮಂಡನೆಗೆ ವಿರೋಧ ಪಕ್ಷಗಳಿಂದ ಪ್ರತಿಭಟನೆ ವ್ಯಕ್ತವಾಗಿದ್ದಾಗಿ ವರದಿಯಾಗಿದೆ (ಪ್ರ.ವಾ., ಜುಲೈ 25). ಇದು ಅಚ್ಚರಿ ಮತ್ತು ಆತಂಕ ಮೂಡಿಸುವಂತಹದ್ದು. ಏಕೆಂದರೆ ವಸೂಲಾಗದ ಸಾಲದ ಬಗ್ಗೆ ನಾಗರಿಕರು ಚಿಂತಿತರಾಗಿದ್ದಾರೆ.

ಇಂಥ ಸಾಲಗಳು ಪರೋಕ್ಷವಾಗಿ ಜನಸಾಮಾನ್ಯರ ತಲೆಯ ಮೇಲೆ ಬಂದು ಬೀಳುತ್ತವೆ. ಇದನ್ನು ತಪ್ಪಿಸುವ ಉದ್ದೇಶದಿಂದ ರೂಪಿಸಿದ ಇಂಥ ಮಸೂದೆಗೆ ಸರ್ವಸಮ್ಮತ ಬೆಂಬಲ ನೀಡುವುದು ಬಿಟ್ಟು, ವಿರೋಧಿಸುವುದು ಸಮರ್ಥನೀಯವಲ್ಲ. ವಿರೋಧ ಪಕ್ಷಗಳು ಉದ್ದೇಶಪೂರಿತ ಸುಸ್ತಿದಾರರ ಪರವಾಗಿ ಇವೆಯೇ ಅಥವಾ ವಿರೋಧಿಸುವುದಕ್ಕೆಂದೇ ವಿರೋಧಿಸುತ್ತಿವೆಯೇ?

ಡಾ. ಚನ್ನು ಅ. ಹಿರೇಮಠ, ರಾಣೆಬೆನ್ನೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.