ADVERTISEMENT

ವಿ.ವಿ.ಗಳು ಅನಾಥ

​ಪ್ರಜಾವಾಣಿ ವಾರ್ತೆ
Published 6 ಮೇ 2015, 19:30 IST
Last Updated 6 ಮೇ 2015, 19:30 IST

ಸಮಾಜವನ್ನು ಸರಿದಾರಿಗೆ ತರುವ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಜ್ಞಾನ ದೇಗುಲಗಳಾದ ರಾಜ್ಯದ ಹಲವು ವಿಶ್ವವಿದ್ಯಾಲಯಗಳು ಸಾರಥಿಗಳಿಲ್ಲದೆ ಅನಾಥವಾಗಿವೆ. ಕಳೆದ 10 ತಿಂಗಳಿನಿಂದ ಕುಲಪತಿಯಿಲ್ಲದೆ, ಹಲವು ವರ್ಷಗಳಿಂದ ನೇಮಕಾತಿ ಆಗದೆ ‘ಗುರು ಒಕ್ಕಾಲು, ಶಿಷ್ಯಂದಿರು ಮುಕ್ಕಾಲು’ ಎಂಬಂತಾಗಿರುವ ಗುಲ್ಬರ್ಗ ವಿಶ್ವವಿದ್ಯಾಲಯವನ್ನು ಕೇಳುವವರಿಲ್ಲ. 

ಕರ್ನಾಟಕ  ವಿಶ್ವವಿದ್ಯಾಲಯದಲ್ಲಿ (ಧಾರವಾಡ) ಕುಲಪತಿಯಿಲ್ಲದೆ ಆಡಳಿತ ಸೊರಗಿದೆ. ಬೋಧಕೇತರರ ಆಯ್ಕೆ ಆಗದೇ ಅರ್ಧಕ್ಕೆ ನಿಂತಿರುವ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ (ಬೆಳಗಾವಿ), ಬೋಧಕ ಮತ್ತು ಬೋಧಕೇತರರ ಆಯ್ಕೆ ಅರ್ಧಕ್ಕೆ ನಿಂತಿರುವ ಕೃಷ್ಣದೇವರಾಯ ವಿಶ್ವವಿದ್ಯಾಲಯ (ಬಳ್ಳಾರಿ) ಇದಕ್ಕೆ ಇನ್ನೂ ಕೆಲವು ಉದಾಹರಣೆ. ನಮ್ಮ ರಾಜ್ಯ ಸಂಸ್ಕೃತಕ್ಕೆ ಹೆಸರಾಗಿದೆ. ಆದರೆ ಸಂಸ್ಕೃತ ವಿಶ್ವವಿದ್ಯಾಲಯ ಕುಲಪತಿ ಇಲ್ಲದೆ ಅನಾಥವಾಗಿದೆ.

ಈ ದೇಗುಲಗಳಿಗೆ ಸಾರಥಿಗಳನ್ನು ಆಯ್ಕೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆಯೇ? ಅದಕ್ಕಾಗಿ ವಿದ್ಯಾರ್ಥಿಗಳು ರಾಜ್ಯದಾದ್ಯಂತ ಪ್ರತಿಭಟನೆಗೆ ಇಳಿಯಬೇಕೆ? ಬಿ.ಆರ್.ಅಂಬೇಡ್ಕರ್  ಹೇಳಿದಂತೆ, ಶಿಕ್ಷಣ ಪಡೆಯಲು ಸಂಘಟನೆ, ಹೋರಾಟದ ದಾರಿ ಹಿಡಿಯಬೇಕೆ?  ಪಾರದರ್ಶಕವಾದ ಆಯ್ಕೆ ಶೀಘ್ರ ನಡೆಯಲಿ.
ಡಾ. ಡಿ.ಸೀತಾನಾಯಕ್, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.