ADVERTISEMENT

ವೈಭವೀಕರಣ ಬೇಕೆ?

ಚನ್ನು ಅ.ಹಿರೇಮಠ ರಾಣಿಬೆನ್ನೂರು
Published 4 ಸೆಪ್ಟೆಂಬರ್ 2015, 19:41 IST
Last Updated 4 ಸೆಪ್ಟೆಂಬರ್ 2015, 19:41 IST

ಇಂದ್ರಾಣಿ ಮುಖರ್ಜಿ ಪ್ರಕರಣ ಬೆಳಕಿಗೆ ಬಂದಾಗಿನಿಂದಲೂ ಮಕ್ಕಳಿಗೆ ಪತ್ರಿಕೆಗಳನ್ನು ಓದುವಂತೆ ಹೇಳಲೂ ಮುಜುಗರವಾಗುತ್ತಿದೆ.  ದಿನವೂ ಅದು ಒಂದು ದೊಡ್ಡ ವಿಷಯವೆಂಬಂತೆ ಎಲ್ಲ ಮಾಧ್ಯಮಗಳಲ್ಲೂ ಚರ್ಚಿತವಾಗುತ್ತಿದೆ. ಕಳೆದ ವಾರ ಶಾಲೆಯೊಂದಕ್ಕೆ ಭೇಟಿ ನೀಡಿದ್ದೆ.  ಆಯಾ ದಿನದ ಪತ್ರಿಕೆಯ ಪ್ರಮುಖ ವಿಷಯಗಳನ್ನು ಫಲಕದ ಮೇಲೆ ಬರೆಯುವ ರೂಢಿ ಆ ಶಾಲೆಯಲ್ಲಿದೆ.  ವಿದ್ಯಾರ್ಥಿಗಳು ಬರೆದಿದ್ದನ್ನು ಶಿಕ್ಷಕರು ಗಮನಿಸಿಲ್ಲ.  ಇಂದ್ರಾಣಿಯ ಕಥೆಯ ಮುಖ್ಯಸುದ್ದಿಯನ್ನು ಮಕ್ಕಳು ತಮಗರಿವಿಲ್ಲದೆ ಫಲಕದಲ್ಲಿ ಬರೆದಿದ್ದವು! 
ಒಂದು ಸಾಮಾನ್ಯ ಸಂಗತಿಯಂತೆ ಅದನ್ನು ವರದಿ ಮಾಡಿ ಬಿಸಾಕುವುದನ್ನು ಬಿಟ್ಟು ದಿನವೂ ಅವರ ಗಂಡಂದಿರ ಸಂಖ್ಯೆ, ಮಕ್ಕಳ ಸಂಖ್ಯೆ, ಕುಟುಂಬಗಳ ಸಂಖ್ಯೆ ಇತ್ಯಾದಿಗಳನ್ನು ವಿವರಿಸುವುದೇತಕ್ಕೆ?  ಪತ್ರಿಕೆಗಳನ್ನು ಕೇವಲ ವಯಸ್ಕರು ಮಾತ್ರ ಓದುವುದಿಲ್ಲವಾದ್ದರಿಂದ ಇನ್ನು ಮುಂದಾದರೂ ಇಂಥ ವಿಸ್ತೃತ ವರದಿಗಳನ್ನು ಪತ್ರಿಕೆಗಳವರು ಪ್ರಕಟಿಸದಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.