ADVERTISEMENT

ಶೀಘ್ರ ಜಾರಿಯಾಗಲಿ

​ಪ್ರಜಾವಾಣಿ ವಾರ್ತೆ
Published 17 ಮೇ 2017, 19:30 IST
Last Updated 17 ಮೇ 2017, 19:30 IST

ರಾಷ್ಟ್ರೀಯ ಸೇವಾ ಯೋಜನೆಯನ್ನು (ಎನ್‌ಎಸ್‌ಎಸ್‌) ಪ್ರೌಢಶಾಲೆಗಳಿಗೂ ವಿಸ್ತರಿಸಲು ಸರ್ಕಾರ ಮುಂದಾಗಿರುವುದು ಸಂತಸದ ವಿಚಾರ.
ವಿದ್ಯಾರ್ಥಿಗಳಲ್ಲಿ ಪ್ರೌಢ ಶಾಲಾ ಹಂತದಲ್ಲಿಯೇ ಸಮಾಜ ಸೇವೆ, ಸಮಯ ಪ್ರಜ್ಞೆಯಂತಹ ಗುಣಗಳನ್ನು ಬೆಳೆಸಲು ಈ ಯೋಜನೆ ಸಹಕಾರಿ.

ಎನ್‌ಎಸ್‌ಎಸ್‌ ಮೂಲಕ ಶಾಲಾ ಮಟ್ಟದಲ್ಲಿಯೇ ಮಕ್ಕಳಲ್ಲಿ ‘ಸಮಾಜ ಸೇವೆ’ಯ ಬೀಜ ಬಿತ್ತಿದರೆ ಪದವಿ ಹಂತಕ್ಕೆ ಬರುವುದರೊಳಗೆ ಹಲವರು ಆದರ್ಶ ವಿದ್ಯಾರ್ಥಿಗಳಾಗುವುದರಲ್ಲಿ ಎರಡು ಮಾತಿಲ್ಲ.

ಒಳ್ಳೆಯ ಸಮಾಜ ನಿರ್ಮಾಣಕ್ಕೆ ಇದು ಅಗತ್ಯ. ಪ್ರೌಢಶಾಲಾ ಮಟ್ಟಕ್ಕೆ ಎನ್ಎಸ್ಎಸ್ ವಿಸ್ತರಿಸಲು ಮುಂದಾಗಿರುವ ಸರ್ಕಾರದ ಕ್ರಮಕ್ಕೆ ವಿದ್ಯಾರ್ಥಿ ಸಮೂಹದ ಸಂಪೂರ್ಣ ಬೆಂಬಲವಿದೆ.
-ಬೀರಪ್ಪ ದು. ಡಂಬಳಿ, ಕೋಹಳ್ಳಿ, ಅಥಣಿ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT