ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸಲು ₨2500 - ಶುಲ್ಕ ನಿಗದಿ ಮಾಡಲಾಗಿದೆ. ನಿರುದ್ಯೋಗಿ ಅಥವಾ ಅತಿಥಿ ಉಪನ್ಯಾಸಕರಿಗೆ ನೀಡುವ ಸಂಬಳವೇ ₨ 8,000. ಹೀಗಿರುವಾಗ ಹುದ್ದೆಗೆ ಅರ್ಜಿ ಸಲ್ಲಿಸಲು ಈ ಪ್ರಮಾಣದ ಶುಲ್ಕ ನಿಗದಿ ಎಷ್ಟು ಸರಿ?
ಈ ಶುಲ್ಕ ಇತರ ರಾಜ್ಯಗಳಿಗಿಂತ ಸುಮಾರು -7 ಪಟ್ಟು ಹೆಚ್ಚಿಗೆ ಇದೆ. (ದೇಶದಲ್ಲೇ ಅತಿ ಹಿಂದುಳಿದ ರಾಜ್ಯ ಬಿಹಾರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸಲು ₨300 -ಶುಲ್ಕ ಇದೆ. ಯು.ಪಿ.ಎಸ್.ಸಿ ನಡೆಸುವ ಐ.ಎ.ಎಸ್ ಪರೀಕ್ಷೆಗೆ ₨50 ಶುಲ್ಕ ಇದೆ).
ಹೀಗಿರುವಾಗ ಅತಿಯಾದ ಶುಲ್ಕದಿಂದ ನಿರುದ್ಯೋಗಿ ಪದವೀಧರರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರ ಈ ಹುದ್ದೆಯನ್ನು ಅರ್ಜಿ ಶುಲ್ಕ ರಹಿತವಾಗಿಸಬೇಕು ಇಲ್ಲವೇ ಕನಿಷ್ಠ ಶುಲ್ಕ ನಿಗದಿ ಮಾಡಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.