ADVERTISEMENT

ಸಂಸ್ಕೃತ ವಿ.ವಿ: ತಪ್ಪು ಗ್ರಹಿಕೆ

ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ
Published 17 ಸೆಪ್ಟೆಂಬರ್ 2014, 19:30 IST
Last Updated 17 ಸೆಪ್ಟೆಂಬರ್ 2014, 19:30 IST

ವಾಚಕರವಾಣಿಯಲ್ಲಿ ಪ್ರಕಟವಾದ  (‘ಏನಿದೆ ನೈತಿಕ ಬಲ?’; ಸೆ. 16) ಎಸ್. ಮಂಜುನಾಥ ಅವರ ಪತ್ರಕ್ಕೆ ನನ್ನ ಪ್ರತಿಕ್ರಿಯೆ.

ನಾನು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾ­ಲಯದ ಕುಲಪತಿಯಾಗಿ ೨೦೧೦ರಿಂದ ೨೦೧೪­ರವರೆಗೆ ಕಾರ್ಯನಿರ್ವಹಿಸಿ ನಿವೃತ್ತಿಯಾಗಿದ್ದೇನೆ. ನನ್ನ ಕಾಲಾವಧಿಯಲ್ಲಿ ಪೌರೋಹಿತ್ಯ ವೃತ್ತಿಗೆ ಸಂಬಂಧಿಸಿದ ಪಠ್ಯಕ್ರಮವನ್ನಾಗಲೀ, ಪಠ್ಯವನ್ನಾ­ಗಲೀ ಸಿದ್ಧಪಡಿಸಿರುವುದಿಲ್ಲ. ನನ್ನ ಅವಧಿಯಲ್ಲಿ ಸಂಸ್ಕೃತ ಭಾಷೆ ಬೆಳವಣಿಗೆಯ ದೃಷ್ಟಿಕೋನ­ದಿಂದ, ಸಮಾಜಮುಖಿ ಹಾಗೂ ಮಾನವೀಯ ಮೌಲ್ಯಗಳಿಗೆ ಒತ್ತು ನೀಡುವ ಕಾರ್ಯ ಯೋಜ­ನೆ­ಗಳನ್ನು ಹಾಕಿಕೊಂಡು ನಿರ್ವಹಿಸ­ಲಾಗಿದೆ.

ಸೆ. ೧೪ರಂದು ನಡೆದ ದಲಿತ ಸಾಹಿತ್ಯ ಸಮ್ಮೇಳನ­ದಲ್ಲಿ ಹಲವಾರು ವಿಚಾರಗಳನ್ನು ಸಾಮಾಜಿಕ ಹಾಗೂ ಮಾನವೀಯ ನೆಲೆಯಲ್ಲಿ ಪ್ರಸ್ತಾಪಿ­ಸಿ­ದ್ದೇನೆ. ದೃಶ್ಯಮಾಧ್ಯಮ ತನ್ನ ಜವಾ­ಬ್ದಾರಿಯನ್ನು ಹೇಗೆ ನಿರ್ವಹಿಸ­ಬೇಕೆಂಬುದನ್ನು ನನ್ನ ಜ್ಞಾನದ ಪರಿ­ಮಿತಿಯೊಳಗೆ ಸೂಚ್ಯವಾಗಿ ಭಾಷಣದಲ್ಲಿ ಪ್ರಸ್ತಾಪಿಸಿದ್ದೇನೆ. ಎಲ್ಲಾ ವಿಷಯ­ಗಳ ಬಗ್ಗೆ ಅಧಿ­ಕಾರಯುತವಾಗಿ ಮಾತನಾಡುವ ಸರ್ವ­ತಂತ್ರ ಸ್ವತಂತ್ರನಲ್ಲ.

ಕರ್ನಾಟಕ ದಲಿತ ಪ್ರಾಧಿ­ಕಾರ ­ಸ್ಥಾಪಿಸ­­ಬೇಕೆಂಬ ಹಕ್ಕೊತ್ತಾಯ ಮಾಡಿರುವುದು ನಿಜ. ಆದರೆ, ಅದರ ಅಧ್ಯಕ್ಷನಾಗಬೇಕೆಂಬ ಹಂಬಲ ಎಂದಿಗೂ ಇಲ್ಲ. ಇಂಥ ತಪ್ಪು ಗ್ರಹಿಕೆ­ಗಳನ್ನು ಹೇಳಿಕೆಯ ರೂಪದಲ್ಲಿ ಪತ್ರ ಬರೆದಿರುವ ಮಂಜುನಾಥರ ಬಗೆಗೆ ನನ್ನ ಅನುಕಂಪವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.