ADVERTISEMENT

ಸಮಜಾಯಿಷಿಗೆ ಬರೆದದ್ದು

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 19:30 IST
Last Updated 11 ಜನವರಿ 2017, 19:30 IST

‘ಗಾಂಧಿಯವರೊಂದಿಗೆ 11 ಯುವತಿಯರ ವಾಗ್ವಾದ’ ಎಂಬ ಅಂಕಣದಲ್ಲಿ ರಾಮಚಂದ್ರ ಗುಹಾ ಅವರು ‘ಮಹಾತ್ಮನಲ್ಲೂ ಇದ್ದ ಪುರುಷ ಪ್ರಧಾನ ಪೂರ್ವಗ್ರಹಕ್ಕೆ ಬೆಳಕು ಚೆಲ್ಲಿದ ದಿಟ್ಟೆಯರು’ ಎಂದು ಹೇಳಿದ್ದಾರೆ (ಗುಹಾಂಕಣ, ಪ್ರ.ವಾ., ಜ. 6).

ಇಲ್ಲಿ ಒಟ್ಟು ವಿಷಯ ರಂಜಕಗೊಂಡು ಗಾಂಧೀಜಿಗೆ ಅಪಚಾರವೆಸಗಿದಂತೆ ಅನ್ನಿಸುತ್ತದೆ. ನನ್ನ ಅರಿವಿನ ಮಟ್ಟಿಗೆ ಗಾಂಧೀಜಿ ಎಲ್ಲಿಯೂ ಪುರುಷ ಪ್ರಧಾನ ಎನ್ನುವುದು ಗೋಚರಿಸುವುದಿಲ್ಲ. ಆ ಹುಡುಗಿಯರ ಪತ್ರವು ಸಮಜಾಯಿಷಿಗಾಗಿ ಬರೆದಿರುವಂಥದ್ದು. ವಾಗ್ವಾದಕ್ಕಿಳಿದು ಮಹಾತ್ಮನಿಗೆ ಅವಮಾನ ಮಾಡಲು ಹೊರಟಿರುವಂಥದ್ದಲ್ಲ. ಈ ರೀತಿಯ ಪ್ರಶ್ನೆ ಮತ್ತು ಉತ್ತರ ರೀತಿಯ ಬರವಣಿಗೆಯನ್ನು ಗಾಂಧೀಜಿಯವರ ಬದುಕಿನಲ್ಲಿ ಯಥೇಚ್ಛವಾಗಿ ನೋಡಬಹುದು.

ಇನ್ನು ‘ಬೋಸ್ ಅವರು ಕಾಂಗ್ರೆಸ್‌ ಅಧ್ಯಕ್ಷತೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗದಂತೆ ಗಾಂಧಿಯವರ ಅನುಯಾಯಿಗಳಾದ ವಲ್ಲಭಭಾಯಿ ಪಟೇಲ್ ಮತ್ತು ಗೋವಿಂದ ವಲ್ಲಭ ಪಂತ್ ಅವರು ಮಾಡುತ್ತಾರೆ’ ಎಂದಿದ್ದಾರೆ.

ಇಲ್ಲಿ ಗುಹಾ ಅವರಿಗೆ ಒಂದು ಪುಟ್ಟ ಪ್ರಶ್ನೆ: ಬೋಸ್ ಅವರ ಪ್ರಾಮಾಣಿಕತೆ ಮತ್ತು ದಿಟ್ಟತನದ ಬಗ್ಗೆ ಎರಡನೆಯ ಮಾತಿಲ್ಲ. ಆದರೆ ಬೋಸ್ ಅವರು ಆ ಕಾಲಘಟ್ಟದ ಅಹಿಂಸಾತ್ಮಕ ಚಳವಳಿಯ ಬಗ್ಗೆ ಕಾಳಜಿ ಹೊಂದಿದ್ದರೆ? ಮತ್ತು ಹೊರಗಿನಿಂದ ಸೈನ್ಯವನ್ನು ತಂದು ಸ್ವಾತಂತ್ರ್ಯ ಪಡೆಯುತ್ತೇವೆ ಎಂಬುದು ಬಾಲಿಶವಾಗಿರಲಿಲ್ಲವೆ?
-ಶೂದ್ರ ಶ್ರೀನಿವಾಸ್, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.