ADVERTISEMENT

ಸರ್ಕಾರಿ ಶಾಲೆಯಿಂದ ಮಾತ್ರ ಕನ್ನಡದ ಉಳಿವು

ಜಿ.ಕೃಷ್ಣಪ್ಪ
Published 17 ಸೆಪ್ಟೆಂಬರ್ 2014, 19:30 IST
Last Updated 17 ಸೆಪ್ಟೆಂಬರ್ 2014, 19:30 IST

ಕನ್ನಡ ಇಂದು ಉಳಿಯಬೇಕಾಗಿರುವುದು ಸರ್ಕಾರಿ ಶಾಲೆಗಳಿಂದ ಮಾತ್ರ. ಅಲ್ಲಿ ಓದುವವರು ನಿರ್ಗತಿಕ, ಅಸಹಾಯ ದೀನದಲಿತ ಕೂಲಿ ಕಾರ್ಮಿಕರ ಮಕ್ಕಳು. ಪ್ರಜಾಪ್ರಭುತ್ವದಲ್ಲಿ ಅದನ್ನು ಅರಿತು ಶಾಸಕರಾದ ಬಿ. ಸುರೇಶಗೌಡ ಅವರು ತಮ್ಮ ಶಾಸಕರ ನಿಧಿಯಿಂದ ₨ 50 ಲಕ್ಷ ಖರ್ಚು ಮಾಡಿ ತುಮಕೂರು ಜಿಲ್ಲೆಯ ಹೆತ್ತೇ­ನ­­ಹಳ್ಳಿಯ ಸರ್ಕಾರಿ ಶಾಲೆಯನ್ನು ಒಂದು ಅತ್ಯುತ್ತಮ ವಿದ್ಯಾಕೇಂದ್ರವಾಗಿ ಮಾಡಿದ್ದಾರೆ.

ಅವರು ಕನ್ನಡ ಉಳಿಸಲು ಕ್ರಿಯಾಶೀಲವಾಗಿ ತೊಡಗಿಕೊಂಡ ಆದರ್ಶ ಶಾಸಕರಾಗಿದ್ದಾರೆ (ಪದ್ಮರಾಜ ದಂಡಾವತಿ, ನಾಲ್ಕನೇ ಆಯಾಮ, ಸೆ.14)ಇಂತಹ ಆಸ್ತಿಯನ್ನು ಇತರ ಶಾಸಕರು ನಿರ್ಮಿಸಿದರೆ ಕನ್ನಡ ತಾನಾಗಿಯೇ ಉಳಿದು ಬೆಳೆಯುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.