ADVERTISEMENT

ಸಾಧಕರ ಗ್ರಂಥ ಪ್ರಕಟಗೊಳ್ಳಲಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2017, 19:30 IST
Last Updated 10 ಫೆಬ್ರುವರಿ 2017, 19:30 IST

ಕನ್ನಡ ಮತ್ತು ಸಂಸ್ಮೃತಿ ಇಲಾಖೆ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ವತಿಯಿಂದ ಬೇರೆ ಭಾಷೆಗಳ ಅನೇಕ ಗ್ರಂಥಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಪ್ರಕಟ ಮಾಡುತ್ತಿರುವುದು ಮೆಚ್ಚುವಂತಹದ್ದು. ಈಗ ಹೊರ ಬಂದಿರುವ ‘ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು’ ಎಂಬ ಮಾಲಿಕೆಯ 22 ಸಂಪುಟಗಳು ಕನ್ನಡ ಓದುಗರ ಮೆಚ್ಚುಗೆಗೆ ಪಾತ್ರವಾಗಿವೆ.

ಬೇರೆ ಭಾಷೆಗಳಲ್ಲಿ ಪ್ರಕಟವಾಗಿರುವ ಸಾಧಕರು ಹಾಗೂ ಸಮಾಜ ಸುಧಾರಕರ ಮತ್ತಷ್ಟು ಕೃತಿಗಳನ್ನು ಕನ್ನಡಕ್ಕೆ ತರಬೇಕು. ಕಡಿಮೆ ಬೆಲೆಗೆ ಸಿಗುವ ಮಹತ್ವದ ಗ್ರಂಥಗಳು ಸಾರಸ್ವತ ಲೋಕಕ್ಕೆ ನಿರಂತರವಾಗಿ ಸೇರ್ಪಡೆ ಆಗಲಿ.
–ತೂಬಿನಕೆರೆ ಲಿಂಗರಾಜು, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.