ADVERTISEMENT

ಸಿಗರೇಟು ಅಡ್ಡೆ...!

ಪಿ.ಜೆ.ರಾಘವೇಂದ್ರ
Published 29 ಮೇ 2016, 19:30 IST
Last Updated 29 ಮೇ 2016, 19:30 IST

ಮೈಸೂರಿನಲ್ಲಿರುವ ಎಲ್ಲಾ ಟೀ ಸ್ಟಾಲುಗಳೂ ಸಿಗರೇಟು ಅಡ್ಡೆಗಳಾಗಿವೆ. ಈ ಟೀ ಸ್ಟಾಲುಗಳಿಂದ ಹೊರಬರುವ ಹೊಗೆಯು ಎಷ್ಟು ದಟ್ಟವಾಗಿರುತ್ತದೆಂದರೆ ಅಲ್ಲಿ ಮೋಡ ಬಿತ್ತನೆ ಮಾಡುತ್ತಿರುವರೇನೋ ಎಂಬ ಅನುಮಾನ ಮೂಡುತ್ತದೆ.

ಟೀ ಸ್ಟಾಲುಗಳಿಗೆ ಬರುವ ‘ಧೂಮಕೇತು’ಗಳು ಅಂಗಡಿಯ ಹೊರಗೆ ಕುಳಿತು ಬುಸಬುಸನೆ ಉಗುಳುವ ಹೊಗೆಯು ಸಾರ್ವಜನಿಕರ ಆರೋಗ್ಯಕ್ಕೆ ಮಾರಕವಾಗಿದೆ. ಈ ಟೀ ಸ್ಟಾಲುಗಳಿಗೆ ಪರವಾನಗಿಯನ್ನು ನೀಡಿದ ಮೈಸೂರು ಮಹಾನಗರಪಾಲಿಕೆಗೆ ಸ್ವಲ್ಪವೂ ಜವಾಬ್ದಾರಿ ಇದ್ದಂತಿಲ್ಲ. ಗ್ರಾಹಕರಿಗೆ ಟೀ ಕುಡಿಸುತ್ತೇವೆಂದು ಪಾಲಿಕೆಯಿಂದ ಲೈಸೆನ್ಸ್ ಪಡೆಯುವ ಈ ಅಂಗಡಿಗಳವರು ಸಾರ್ವಜನಿಕರಿಗೆ ಹೊಗೆ ಕುಡಿಸುತ್ತಿದ್ದಾರೆ.

ಇವುಗಳ ಅರಿವಿರುವ ಸಂಬಂಧಪಟ್ಟ  ಅಧಿಕಾರಿಗಳು ಮೂಗು ಮುಚ್ಚಿಕೊಂಡು ತೆಪ್ಪಗಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿ ಸುಪ್ರೀಂ ಕೋರ್ಟು ಆದೇಶಿಸಿದ್ದರೂ  ಈ ಟೀ ಸ್ಟಾಲುಗಳು ಉಗುಳುತ್ತಿರುವ ಹೊಗೆ ಮೈಸೂರಿನ ಪೊಲೀಸರ ಮೂಗಿಗೆ ಬಡಿದಿಲ್ಲ.

ಮೇ 31 ವಿಶ್ವ ತಂಬಾಕು ರಹಿತ ದಿನ! ಈಗಲಾದರೂ ನಮ್ಮ ಪಾಲಿಕೆ ಮತ್ತು ಪೊಲೀಸರು, ಸಿಗರೇಟು ಅಡ್ಡೆಗಳಾಗಿರುವ ಟೀ ಸ್ಟಾಲಿನವರ ವಿರುದ್ಧ ಕ್ತಮ ಕೈಗೊಳ್ಳುತ್ತಾರೋ ಇಲ್ಲವೋ ಎಂದು ಕಾದು ನೋಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.