ADVERTISEMENT

ಸ್ವಾಮಿಗಳಿಗೆ ಜಾತಿಯ ನಂಟು ಬೇಕೆ?

ಪ್ರೊ.ಅಮೃತ ಸೋಮೇಶ್ವರ, ಅಡ್ಕ, ದಕ್ಷಿಣ ಕನ್ನಡ
Published 17 ಡಿಸೆಂಬರ್ 2014, 19:30 IST
Last Updated 17 ಡಿಸೆಂಬರ್ 2014, 19:30 IST

ಇತ್ತೀಚೆಗೆ ಕರಾವಳಿ ಭಾಗದಲ್ಲಿ ಬಂಟರು ಒಗ್ಗೂಡಿ ಬಲಿಷ್ಠ ಸಮಾಜ ನಿರ್ಮಿಸಬೇಕು ಎಂದು ಬಾರ್ಕೂರು ಮಹಾಸಂಸ್ಥಾನದ ಡಾ.ವಿಶ್ವ ಸಂತೋಷ ಭಾರತಿ ಶ್ರೀಪಾದರು ಕರೆ ನೀಡಿದ್ದು ಸುದ್ದಿಯಾಗಿತ್ತು. ಇದನ್ನು ಓದಿ ತುಂಬ ಅಚ್ಚರಿಯಾಯಿತು. ವ್ಯಕ್ತಿಯೊಬ್ಬ ಸನ್ಯಾಸ ಸ್ವೀಕರಿಸಿ ಸ್ವಾಮಿಯಾದ ನಂತರ ಅವರ ಪೂರ್ವಾ­ಶ್ರಮದ ಜಾತಿಯೊಡನೆ ವಿಶಿಷ್ಟ ಸಂಬಂಧ, ಅಭಿಮಾನ ಇರಿ­ಸುವುದು ನ್ಯಾಯವೇ?  ಜಾತಿಯ ಸಂಬಂಧ ಕಳಚಿ­ಮಾನವ ಸಮಾಜಕ್ಕೆ ಮಾರ್ಗ­ದರ್ಶನ ನೀಡಬೇಕಾದ ವಿವಿಧ ಕೋಮುಗಳ ಸ್ವಾಮಿ­ಗಳು ಜಾತಿಗಳ ಒಗ್ಗಟ್ಟಿಗೆ ಕರೆ ಕೊಡುವುದು ಅನುಚಿತ ಎನ್ನದೆ ವಿಧಿಯಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.