ADVERTISEMENT

ಹಿರಿಯ ನಾಗರಿಕರಿಗೆ ತೊಂದರೆ ಆಗದಿರಲಿ

ತಿಮ್ಮಪ್ಪ
Published 1 ಸೆಪ್ಟೆಂಬರ್ 2014, 19:30 IST
Last Updated 1 ಸೆಪ್ಟೆಂಬರ್ 2014, 19:30 IST

ಹಿರಿಯ ನಾಗರಿಕರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಬಸ್ಸಿನ ಟಿಕೆಟ್‌ ದರದಲ್ಲಿ ರಿಯಾಯಿತಿ ಕೊಟ್ಟಿದ್ದೀರಿ. ಆದರೆ ಕೆಲವು ಬಸ್ಸುಗಳಲ್ಲಿ ನಿರ್ವಾಹಕರು ಮೊದಲನೆ ಹಂತಕ್ಕೆ ರೂ. 6  ತೆಗೆದುಕೊಳ್ಳುತ್ತಾರೆ. 2ನೇ ಹಂತಕ್ಕೆ ರೂ. 10 ಅಥವಾ ರೂ. 12 ತೆಗೆದುಕೊಳ್ಳುತ್ತಾರೆ.

ಇದರಲ್ಲಿ ಯಾವುದು ಸರಿ ಯಾವುದು ಸರಿಯಿಲ್ಲ ಎಂಬುದು ಗೊತ್ತಾಗುತ್ತಿಲ್ಲ. ಇನ್ನು ಕೆಲವರು ರೂ. 9 ಟಿಕೆಟ್‌ ಬದಲಾಗಿ ರೂ. 10 ಅಥವಾ ರೂ. 12 ಟಿಕೆಟ್‌ ಕೊಡುತ್ತಾರೆ. ಇನ್ನು ಕೆಲವರು ರೂ. 11ಬದಲಾಗಿ ರೂ. 12  ಟಿಕೆಟ್‌ ಕೊಡುತ್ತಾರೆ. ಆದ್ದರಿಂದ ರಿಯಾಯಿತಿ ದರವನ್ನು ಪೇಪರಿನಲ್ಲಿ ತಿಳಿಸಿದರೆ ಒಳ್ಳೆಯದು. ಅದೇ ತರಹ ಟಿಕೆಟ್‌ ಪ್ರಿಂಟ್‌ ಮಾಡಿದರೆ ಒಳ್ಳೆಯದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.