ADVERTISEMENT

ಹೂಳು ತೆಗೆಯಿರಿ

ಡಾ.ವಿ.ಆರ್‌.ಲೋಣಿ ಸಿಂದಗಿ
Published 1 ಮೇ 2016, 19:44 IST
Last Updated 1 ಮೇ 2016, 19:44 IST

ಪ್ರತಿವರ್ಷ ಬೇಸಿಗೆ ಬಂತೆಂದರೆ ನೀರಿನ ವಿಪರೀತ ಅಭಾವ ಸ್ಥಿತಿ ಎದುರಾಗುತ್ತದೆ. ಇದನ್ನು ಮುಂಬರುವ ವರ್ಷಗಳಲ್ಲಿ ಕಡಿಮೆ ಮಾಡಲು ಇರುವ ಉಪಾಯವೆಂದರೆ ಹೂಳು ತೆಗೆಯುವುದು.

ಬೇಸಿಗೆಯಲ್ಲಿ ಕೆರೆ, ಹಳ್ಳ, ನದಿ, ಜಲಾಶಯಗಳು ಬತ್ತಿ ಹೋಗುತ್ತವೆ. ಕನಿಷ್ಠ 2–3 ತಿಂಗಳ ಮಟ್ಟಿಗಾದರೂ ನೀರಿರುವುದಿಲ್ಲ. ಇಂತಹ ಸಮಯದಲ್ಲಿ  ಕೆರೆ, ಜಲಾಶಯಗಳ ಹೂಳು ತೆಗೆಯಬೇಕು.

ಇದರಿಂದ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚುತ್ತದೆ. ಕಾರ್ಮಿಕರಿಗೆ ಕೂಲಿ ಕೆಲಸ ಸಿಗುತ್ತದೆ. ಗುಳೆ ಹೋಗುವುದೂ ತಪ್ಪುತ್ತದೆ. ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚುವುದರ ಜತೆಗೆ ಅಂತರ್ಜಲ ಮಟ್ಟ ಹೆಚ್ಚಾಗಿ ಬಾವಿ, ಕೊಳವೆಬಾವಿಗಳಲ್ಲಿ ಕೂಡ ನೀರು ಸಿಗುತ್ತದೆ. ಆದ್ದರಿಂದ ಹೂಳು ತೆಗೆಯುವ ಕಾರ್ಯಕ್ಕೆ ಸರ್ಕಾರ ಮುಂದಾಗಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.