ADVERTISEMENT

ಹೋರಾಟಕ್ಕೆ ಬೆಲೆ ಕೊಡಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 19:30 IST
Last Updated 18 ಜುಲೈ 2017, 19:30 IST

ಮಹದಾಯಿ, ಕಳಸಾ - ಬಂಡೂರಿ ಹೋರಾಟ ಎರಡು ವರ್ಷ ಪೂರ್ಣಗೊಳಿಸಿದ್ದರೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿರುವುದು  ಶೊಚನೀಯ ಸಂಗತಿ.
ನೂರಾರು ಜನರು ನಿತ್ಯವೂ ಹೋರಾಟ ಮಾಡಿದರೂ ಆಳುವವರಿಗೆ ಕರುಣೆ ಮೂಡುತ್ತಿಲ್ಲ.  ಜನರ ಚಳವಳಿ, ಹೋರಾಟ, ಪ್ರತಿಭಟನೆಗಳಿಗೆ ಬೆಲೆ ಇಲ್ಲ ಎಂದಮೇಲೆ ಪ್ರಜಾಪ್ರಭುತ್ವಕ್ಕೆ ಏನು ಬೆಲೆ? ಪ್ರಜ್ಞಾವಂತರು, ಕುಟುಂಬದ ಜೀವನ ನಿರ್ವಹಣೆ ಹೊಣೆ ಹೊತ್ತವರು ಮುಂದಿನ ದಿನಗಳಲ್ಲಿ ಖಂಡಿತ ಇಂಥ ಹೋರಾಟಗಳ ಮುಂದಾಳತ್ವ ವಹಿಸಲು ಉದಾಸೀನ ತೋರಿಸುವರು. 

ಜನರು ವೈಯಕ್ತಿಕ ಬದುಕು ತ್ಯಾಗಮಾಡಿ ಜನಸಮುದಾಯದ ಏಳಿಗೆಗಾಗಿ  ಸೇವೆ ಮಾಡುವುದು ತಪ್ಪೇ? ಸರ್ಕಾರದ ನಿಲುವಿನಿಂದ ಈ ರೀತಿಯ  ಸಂದೇಹ ಮೂಡುವಂತಾಗಿದೆ.

ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಎಲ್ಲರೂ  ಬಹುದೊಡ್ಡ ಬೆಲೆ ತೆರಬೇಕಾದೀತು.
-ಪ್ರಹ್ಲಾದ್ ವಾ. ಪತ್ತಾರ, ಯಡ್ರಾಮಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.