ADVERTISEMENT

‘ಕಮಿಷನ್‌’ ಆಸೆಗಾಗಿ ವೃತ್ತಿಗೆ ಮಸಿ ಬಳಿದವರು...

​ಪ್ರಜಾವಾಣಿ ವಾರ್ತೆ
Published 23 ಜುಲೈ 2014, 19:30 IST
Last Updated 23 ಜುಲೈ 2014, 19:30 IST

ದೆಹಲಿಯಲ್ಲಿ ಕೆಲವು ವೈದ್ಯರು ‘ಕಮಿಷನ್’ ಆಸೆಗಾಗಿ   ವೈದ್ಯಕೀಯ ಪ್ರಯೋಗಾಲಯಗಳಲ್ಲಿ ಅನವಶ್ಯಕವಾಗಿ ವಿವಿಧ ಪರೀಕ್ಷೆ ಮಾಡಿಸುವಂತೆ ರೋಗಿಗಳಿಗೆ   ಸೂಚಿಸುತ್ತಿದ್ದಾರೆ ಎಂಬುದು ಕುಟುಕು ಕಾರ್ಯಾಚರಣೆಯಿಂದ ಹೊರಬಿದ್ದಿದೆ. ಇದು  ದುರದೃಷ್ಟಕರ. ವೈದ್ಯ ವೃತ್ತಿಗೆ ಕಳಂಕ.

ಈ ಕುರಿತು ಕೇಂದ್ರ ಸರ್ಕಾರ ಸಮಗ್ರ ವಿಚಾರಣೆಗೆ ಆದೇಶಿಸಿರುವುದು ಸರಿಯಾದ ಕ್ರಮ.  ಕೆಲವು  ವೈದ್ಯರು ಶೇಕಡ ೩೫ರಿಂದ ೫೦ರಷ್ಟು ಕಮಿಷನ್‌ ಪಡೆಯುತ್ತಿದ್ದಾರೆ ಎಂಬ ಅಂಶ ಬಯಲಾಗಿದೆ. ಇದು ನಾಚಿಕೆಗೇಡು. ಈ ಚಾಳಿ ದೆಹಲಿಗೆ ಮಾತ್ರ ಸೀಮಿತವಾಗಿಲ್ಲ. 

ಸಾಮಾನ್ಯ ದರದ ಔಷಧ ಮತ್ತು ಮಾತ್ರೆಗಳ ಬದಲು ದುಬಾರಿ  ಬೆಲೆಯ  ಔಷಧ–-ಮಾತ್ರೆಗಳನ್ನು ಕೊಂಡುಕೊಳ್ಳು ವಂತೆ  ಚೀಟಿಗಳನ್ನು ಬರೆದುಕೊಡುವ ವೈದ್ಯರಿದ್ದಾರೆ. ಈ ಮೂಲಕವೂ ಸಾಕಷ್ಟು ಕಮಿಷನ್‌ ಪಡೆ ಯುತ್ತಾರೆ ಎಂಬುದು ತೆರೆದಿಟ್ಟ ಗುಟ್ಟು. ವೃತ್ತಿಯ ನೀತಿ ಮತ್ತು ನಿಯಮಗಳನ್ನು ಗಾಳಿಗೆ ತೂರುತ್ತಿರುವ ವೈದ್ಯರ ಎದುರು ರೋಗಿಗಳು ನಿಸ್ಸಹಾಯಕರಾಗಿದ್ದಾರೆ.

ಒಂದೇ ರೋಗಕ್ಕೆ ಔಷಧಿಗೆ ಬೇರೆ ಬೇರೆ ಔಷಧ ತಯಾರಿಕಾ ಕಂಪೆನಿಯವರು ಒಂದೊಂದು ರೀತಿ ಬೆಲೆ ನಿಗದಿಪಡಿಸಿದ್ದಾರೆ. ಯಾವುದೇ ಕಂಪೆನಿಯ ಔಷಧ, ಮಾತ್ರೆಗಳನ್ನು ಸೇವಿಸಿದರೂ ಪರಿಣಾಮ ಒಂದೇ. ಆದರೆ ವೈದ್ಯರು ಹೆಚ್ಚು ಬೆಲೆಯುಳ್ಳ ಔಷಧಿ ಮತ್ತು ಮಾತ್ರೆಗಳಿಗೇ ಚೀಟಿ ಬರೆದುಕೊಟ್ಟು ರೋಗಿಯ ನಾಡಿಬಡಿತ ಹೆಚ್ಚಿಸುತ್ತಾರೆ. ಇದಕ್ಕೆ ಲಗಾಮು ಹಾಕಿ ರೋಗಿಗಳ ಹಿತ ರಕ್ಷಿಸಲು ಸರ್ಕಾರ ಪರಿಹಾರೋಪಾಯ ರೂಪಿಸುವುದು ಅಗತ್ಯ.
–ಕೆ.ವಿ. ಸೀತಾರಾಮಯ್ಯ, ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.