ADVERTISEMENT

ಮಾಸಾಶನ ಹೆಚ್ಚಿಸಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 16:57 IST
Last Updated 3 ಜುಲೈ 2018, 16:57 IST

ಕೇಂದ್ರ ಸರ್ಕಾರವು ರಾಷ್ಟ್ರಪತಿ, ರಾಜ್ಯಪಾಲರು, ನ್ಯಾಯಾಧೀಶರು, ಕೇಂದ್ರದ ಮಂತ್ರಿಗಳು ಹಾಗೂ ಸಂಸದರ ಸಂಬಳ ಹೆಚ್ಚಿಸಿದೆ. ರಾಜ್ಯ ಸರ್ಕಾರವೂ ಶಾಸಕರ ಸಂಬಳ ಏರಿಸಿದೆ. ನೌಕರರಿಗೆ ಆಗಾಗ ವೇತನ ಹೆಚ್ಚುತ್ತಲೇ ಇರುತ್ತದೆ. ಆದರೆ ಕಲಾವಿದರ ಮಾಸಾಶನ ಹೆಚ್ಚಿಸುವ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ.

ಜನ‍ಪ್ರತಿನಿಧಿಗಳಲ್ಲೂ ಕೆಲವರು ಕಲಾವಿದರಾಗಿದ್ದರೆಪರಿಸ್ಥಿತಿ ಬೇರೆಯೇ ಆಗುತ್ತಿತ್ತೇನೋ! ಕಲೆಯ ಗಂಧ ಗಾಳಿ ಇಲ್ಲದವರು ಅಧಿಕಾರ ನಡೆಸಿದರೆ ಕಲಾವಿದರನ್ನು ಕೇಳುವವರು ಯಾರು? ಈಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಅವರು ಚಿತ್ರ ನಿರ್ಮಾಪಕರು. ನಾಯಕ ನಟನ ತಂದೆಯೂ ಆಗಿರುವುದರಿಂದ ಕಲಾವಿದರ ಬವಣೆ ಅವರಿಗೆ ಅರ್ಥವಾಗಬಹುದು. ಇತರ ಕಲಾವಿದರ ಬಗ್ಗೆಯೂ ಅವರು ಗಮನಹರಿಸುತ್ತಾರೆ ಎಂದು ನಿರೀಕ್ಷಿಸಬಹುದೇ?

-ಯಚ್ಚರಪ್ಪ ಶಿರಸಪ್ಪ ಬಡಿಗೇರ,ಕಲಘಟಗಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.