ADVERTISEMENT

‘ನಮ್ದೇ ಗಿರಾಕಿ... ಸಮಾಜ ಸಂಘಟಿಸುತ್ತೆ..!’

ಡಿ.ಬಿ, ನಾಗರಾಜ
Published 20 ಮೇ 2017, 19:30 IST
Last Updated 20 ಮೇ 2017, 19:30 IST

ವಿಜಯಪುರ: ‘ಬಸವಣ್ಣನ ಅನುಯಾಯಿ ನಾನು. ಸಮಾನತೆ ಬಯಸುವ ಎಲ್ಲರ ಅನುಯಾಯಿ. ಸಾಮಾಜಿಕ ನ್ಯಾಯಕ್ಕಾಗಿಯೇ ನನ್ನ ನೇತೃತ್ವದ ಸರ್ಕಾರ ರಾಜ್ಯದಲ್ಲಿ ನಾಲ್ಕು ವರ್ಷದಿಂದ ಶ್ರಮಿಸುತ್ತಿದೆ. ಜಾತ್ಯತೀತ, ಧರ್ಮಾತೀತ ಸಮಾಜ ನಿರ್ಮಾಣವೇ ನಮ್ಮ ಗುರಿ...’
ಬಸವನಬಾಗೇವಾಡಿ ತಾಲ್ಲೂಕು ಕಾಮನಕೇರಿ ಗ್ರಾಮದಲ್ಲಿ ಈಚೆಗೆ ನಡೆದ ಧಾರ್ಮಿಕ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಭಾಷಣದುದ್ದಕ್ಕೂ ಜಾತೀಯತೆಯನ್ನು ವಿರೋಧಿಸಿದ ಪರಿಯಿದು.

ಅರ್ಧ ತಾಸಿಗೂ ಹೆಚ್ಚಿನ ಅವಧಿ ಜಾತೀಯತೆ, ಧರ್ಮಾಂಧತೆ, ಮೌಢ್ಯದ ವಿರುದ್ಧ ವಚನಗಳನ್ನು ಹೇಳುವ ಮೂಲಕ ವೇದಿಕೆಯಲ್ಲಿದ್ದ ಸ್ವಾಮೀಜಿಗಳೇ ಹುಬ್ಬೇರಿಸುವಂತೆ ಸಿದ್ದರಾಮಯ್ಯ ಮಾತನಾಡಿದರು. ಮುಖ್ಯಮಂತ್ರಿಯ ಈ ಮಾತುಗಳಿಗೆ ನೆರೆದಿದ್ದ ಎಲ್ಲರೂ ಭಲೇ ಭಲೇ ಎಂದರು. ಚಪ್ಪಾಳೆ ತಟ್ಟಿ ಬೆಂಬಲ ವ್ಯಕ್ತಪಡಿಸಿದರು.

ಭಾಷಣ ಮುಗಿಸುವ ಮುನ್ನ ಸಿದ್ದರಾಮಯ್ಯ, ‘ವರ್ತೂರು ಪ್ರಕಾಶನ ಒತ್ತಡಕ್ಕೆ ಮಣಿದು ಇಲ್ಲಿಗೆ ಬಂದೆ. ಅವ ನಮ್ದೇ ಗಿರಾಕಿ. ನಮ್ಮ ಜತೆ ಇರ್ತಾನೆ. ಆಗಾಗ್ಗೆ ದೂರ ಆಗ್ತಾನೆ, ಮತ್ತೆ ಬರ್ತಾನೆ. ಆದ್ರೇ ಸಮಾಜ ಸಂಘಟಿಸೋದ್ರಲ್ಲಿ ಸದಾ ಮುಂದಿರ್ತಾನೆ’ ಎನ್ನುವ ಮಾತುಗಳನ್ನು ಹೇಳುತ್ತಿದ್ದಂತೆ ಆವಕ್ಕಾಗುವ ಸರದಿ ನೆರೆದಿದ್ದ ಜನಸ್ತೋಮದ್ದಾಗಿತ್ತು.                                              

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.