ADVERTISEMENT

ಅಂಗೈಯಲ್ಲೇ ಪಿಯಾನೊ

ದಯಾನಂದ ಎಚ್‌.ಎಚ್‌.
Published 1 ಜುಲೈ 2015, 19:30 IST
Last Updated 1 ಜುಲೈ 2015, 19:30 IST

ಪಿಯಾನೊ ಹೊಮ್ಮಿಸುವ ಕಿಂಕಿಣಿಯ ನಾದಕ್ಕೆ ಮನಸೋಲದವರಿಲ್ಲ. ಪಿಯಾನೊ ನುಡಿಸಬೇಕೆಂಬ ಆಸೆ ಇದ್ದರೂ ದುಬಾರಿ ಬೆಲೆ ತೆತ್ತು ಆ ವಾದ್ಯ ಕೊಳ್ಳಲು ಎಲ್ಲರಿಗೂ ಸಾಧ್ಯವಿಲ್ಲ. ಒಂದು ವೇಳೆ ಕೊಂಡು ತಂದರೂ ಚಿಕ್ಕ ಮನೆ ಇದ್ದವರು ಪಿಯಾನೊದಂಥ ದೊಡ್ಡ ವಾದ್ಯವನ್ನು ಇಟ್ಟುಕೊಳ್ಳುವುದೂ ಕಷ್ಟಸಾಧ್ಯ. ಆದರೆ, ಪಿಯಾನೊ ನಿಮ್ಮ ಅಂಗೈಗೇ ಬಂದರೆ?!

ಹೌದು. ಈಗ ಪಿಯಾನೊ ನಿಮ್ಮ ಅಂಗೈ ಅಗಲದಲ್ಲಿ ಲಭ್ಯ. ಇದೇನು ಪಿಯಾನೊ ಗಾತ್ರ ಚಿಕ್ಕದಾಯಿತೇ ಎಂದುಕೊಳ್ಳಬೇಡಿ. ಪಿಯಾನೊ ನುಡಿಸಲು ಈಗ ನಿಮ್ಮ ಬಳಿ ಸ್ಮಾರ್ಟ್‌ಫೋನ್‌ ಇದ್ದರೆ ಸಾಕು. ಪಿಯಾನೊ ನಿಮ್ಮ ಅಂಗೈಯಲ್ಲಿರುತ್ತದೆ. ಯಾವ ರೀತಿಯ ಪಿಯಾನೊ ಆಯ್ಕೆ ಮಾಡಿಕೊಳ್ಳಬೇಕೆಂಬ ಸ್ವಾತಂತ್ರ್ಯವೂ ನಿಮ್ಮದೆ.

Play storeನಲ್ಲಿ ಹಲವು ಬಗೆಯ ಪಿಯಾನೊ ಆಪ್‌ಗಳು ಸಿಗುತ್ತವೆ. Perfect Piano, My Piano, Piano Teacher, Play Piano ಆಪ್‌ಗಳಲ್ಲಿ ಯಾವುದಾದರೊಂದನ್ನು ಇನ್‌ಸ್ಟಾಲ್‌ ಮಾಡಿಕೊಂಡು ಸುಲಭವಾಗಿ ಪಿಯಾನೊ ನುಡಿಸಬಹುದು. ಕೆಲವು ಆಪ್‌ಗಳ ಪಿಯಾನೊಗಳಲ್ಲಿ ಎರಡು, ಮೂರು ಸಾಲು ರೀಡಿಯಂ ಕೂಡಾ ಲಭ್ಯ. ಇನ್ನು ಕೆಲವು ಪಿಯಾನೊಗಳನ್ನು ಇಬ್ಬರು ಒಟ್ಟಿಗೆ ಎದುರು ಬದುರು ಕುಳಿತು ನುಡಿಸಲೂಬಹುದು!

ನಿಮಗೆ ಪಿಯಾನೊ ನುಡಿಸಲು ಬಾರದಿದ್ದರೂ ಪರವಾಗಿಲ್ಲ. ಪಿಯಾನೊ ಬಗ್ಗೆ ಆಸಕ್ತಿ ಇದ್ದರೆ ಸಾಕು. ಪಿಯಾನೊ ಕಲಿಯಲು ಬೇಕಾದ ನೋಟ್ಸ್‌ಗಳು, ಡೆಮೊ ಟ್ಯೂನ್‌ಗಳೂ ಕೂಡಾ ಆಪ್‌ನಲ್ಲೇ ಸಿಗುತ್ತವೆ. ನೀವು ನುಡಿಸಿದ್ದನ್ನು ರೆಕಾರ್ಡ್‌ ಮಾಡಿಕೊಂಡು ಮತ್ತೆ ಕೇಳಬಹುದು. ನುಡಿಸಿದ ಟ್ಯೂನ್‌ ಅನ್ನು ‌ರಿಂಗ್‌ಟೋನ್‌ ಆಗಿ ಕೂಡಾ ಮಾಡಿಕೊಳ್ಳಬಹುದು. ಬಸ್‌ನಲ್ಲಿ ಪಯಣಿಸುವಾಗ,  ಉದ್ಯಾನದಲ್ಲಿ ಕುಳಿತಿದ್ದಾಗ, ಕಾಲ ಕಳೆಯುವುದು ಹೇಗೆಂಬ ಯೋಚನೆ ಬಂದಾಗೆಲ್ಲಾ ಪಿಯಾನೊ ಕೈಗೆತ್ತಿಕೊಳ್ಳಬಹುದು.

ಇದನ್ನು ಚೆನ್ನಾಗಿ ಕಲಿತು ಉತ್ತಮವಾಗಿ ನುಡಿಸಲು ಬರುವಂತಿದ್ದರೆ ಮುಂದೆ ದೊಡ್ಡ ಪಿಯಾನೊ ವಾದಕರೂ ಆಗಬಹುದು!  ಪಿಯಾನೊ ಜತೆಗೆ ಒಂದೇ ಆಪ್‌ನಿಂದ ಗಿಟಾರ್‌, ಮೌತ್‌ ಆರ್ಗನ್‌,  ಕೊಳಲು, ಹಾರ್ಮೋನಿಯಂ ನಾದವನ್ನೂ ಹೊರಡಿಸಬಹುದು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.