ADVERTISEMENT

ಅತಿ ಚಿಕ್ಕ ಸಂಚಾರಿ ನೈಟ್‌ ಕ್ಲಬ್‌

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2017, 19:30 IST
Last Updated 10 ಮಾರ್ಚ್ 2017, 19:30 IST
ಅತಿ ಚಿಕ್ಕ ಸಂಚಾರಿ ನೈಟ್‌ ಕ್ಲಬ್‌
ಅತಿ ಚಿಕ್ಕ ಸಂಚಾರಿ ನೈಟ್‌ ಕ್ಲಬ್‌   

ನೈಟ್‌ ಕ್ಲಬ್‌ ಎಂದರೆ ಅಲ್ಲಿ ಡಿ.ಜೆ ಹಾಡು, ನೃತ್ಯ ಮಾಮೂಲಿ. ಬಿಯರ್‌ ಕುಡಿದು ಕುಣಿದು ಕುಪ್ಪಳಿಸಲು ಎಷ್ಟು ಜಾಗವಿದ್ದರೂ ಸಾಲದು. ಆದರೆ ಇಲ್ಲೊಂದು ನೈಟ್‌ ಕ್ಲಬ್‌ ಇದೆ 6.7 ಅಡಿ ಎತ್ತರದ ಪುಟಾಣಿ ಕ್ಲಬ್‌. ಹೌದು, ಇಂಗ್ಲೆಂಡ್‌ನ ರೋಥರ್‌ಹ್ಯಾಂನಲ್ಲಿ  ಬ್ರಿಟ್ಸ್‌ ಗೆರಾರ್ಡ್‌ ಜೆಂಕಿನ್ಸ್‌–ಓಮರ್‌ ಮತ್ತು ಸ್ಟೇಫಿನ್‌ ರೊಬ್ಸನ್‌ ಅವರು ಈ ಕ್ಲಬ್‌ ನಿರ್ಮಿಸಿದ್ದಾರೆ.

ಇದಕ್ಕೆ ‘ಕ್ಲಬ್‌ 28’ ಎಂದು ಹೆಸರಿಡಲಾಗಿದ್ದು, ಜಗತ್ತಿನ ಅತಿಚಿಕ್ಕ ನೈಟ್‌ಕ್ಲಬ್‌ ಎಂದು ಗಿನ್ನಿಸ್‌ ವಿಶ್ವದಾಖಲೆ ಮಾಡಿದೆ. 6.7 ಅಡಿ ಎತ್ತರ, 3 ಅಡಿ ಅಗಲ ಮತ್ತು 5 ಅಡಿ ಆಳವಿರುವ ಈ ಕ್ಲಬ್‌ಅನ್ನು ಮರದ ಹಲಗೆಗಳಿಂದ ನಿರ್ಮಿಸಲಾಗಿದೆ. 

ಡಿ.ಜೆ ಹಾಗೂ ಗರಿಷ್ಠ ಆರು ಮಂದಿ ಪ್ರವೇಶ ಮಾಡುವಷ್ಟು  ಸ್ಥಳಾವಕಾಶವಿದೆ. ಎರಡು ರೌಂಡ್‌ ಟೇಬಲ್‌, ಸೌಂಡ್‌ ಸಿಸ್ಟ್‌ಮ್‌, ಡಾನ್ಸ್‌ ಫ್ಲೋರ್‌, ಡೈನಮಿಕ್‌ ಲೈಟಿಂಗ್‌, ಹೊರಗಡೆ ಬೌನ್ಸರ್‌ ನಿಲ್ಲುವಂತೆ ವಿನ್ಯಾಸ ಮಾಡಲಾಗಿದೆ.

ನಿಗದಿತ ಶುಲ್ಕ ಪಾವತಿಸಿ ಸಾರ್ವಜನಿಕರೂ ಇದರೊಳಗೆ ಪ್ರವೇಶಿಸಬಹುದು. ರೋಥರ್‌ಹ್ಯಾಂ ಕಾರ್ನಿವಲ್‌ಗಾಗಿ ಈ ಕ್ಲಬ್‌ ನಿರ್ಮಿಸಲಾಗಿದೆ. ಈ ಮುಂಚೆ 2010ರಲ್ಲಿ  ಇಂಗ್ಲೆಂಡ್‌ನಲ್ಲಿ ಲಿವರ್‌ಪೂಲ್‌ ಬೋಲ್ಡ್‌ ಸ್ಟ್ರೀಟ್‌ ಫೆಸ್ಟಿವಲ್‌ನಲ್ಲಿ ದೆಬೊರಹ ಬಾರೆಟ್‌ ಮತ್ತು ಲೀಸಾ ವಿಲಿಯಮ್ಸ್‌ ಅವರು 6.8  ಅಡಿ ಎತ್ತರ, 3.8 ಅಡಿ ಅಗಲದ ನೈಟ್‌ ಕ್ಲಬ್‌ ನಿರ್ಮಿಸಿದ್ದು ದಾಖಲೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT