ADVERTISEMENT

ಅಬ್ಬಾ! ಜಫ್ಫಾ ಕೇಕ್‌...

13.2 ಅಡಿ ಸುತ್ತಳತೆಯ ದೊಡ್ಡ ಗಾತ್ರದಲ್ಲಿ ತಯಾರಿಸಿ ಗಿನ್ನಿಸ್‌ ವಿಶ್ವದಾಖಲೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 19:30 IST
Last Updated 14 ಮಾರ್ಚ್ 2017, 19:30 IST
ಅಬ್ಬಾ! ಜಫ್ಫಾ ಕೇಕ್‌...
ಅಬ್ಬಾ! ಜಫ್ಫಾ ಕೇಕ್‌...   
ವಿಶ್ವ ದಾಖಲೆಗಾಗಿ ಏನೆಲ್ಲಾ ಮಾಡುತ್ತಾರೆ ಗೊತ್ತಾ? ಈ ಸುದ್ದಿ ಓದಿ...ಜಫ್ಫಾ ಕೇಕ್‌ಅನ್ನು 13.2 ಅಡಿ ಸುತ್ತಳತೆಯ ದೊಡ್ಡ ಗಾತ್ರದಲ್ಲಿ ತಯಾರಿಸಿ ಗಿನ್ನಿಸ್‌ ವಿಶ್ವದಾಖಲೆ ಪುಟ ಸೇರುವಂತೆ ಮಾಡಿದ್ದಾರೆ. 
 
ಇಂಗ್ಲೆಂಡ್‌ನ ಶೆಫ್‌ ಫ್ರಾನ್ಸಸ್ ಕ್ವಿನ್‌ ಅವರು ಜಗತ್ತಿನ ಬಹುದೊಡ್ಡ ಜಫ್ಫಾ ಕೇಕ್‌ ತಯಾರಿಸಿ ಈ ದಾಖಲೆ ಬರೆದಿದ್ದಾರೆ. ಜಫ್ಫಾ ಕೇಕ್‌ಗಳು ಸಾಮಾನ್ಯವಾಗಿ ಬಿಸ್ಕೇಟ್‌ ಗಾತ್ರದಲ್ಲಿರುತ್ತವೆ. 
 
2013ರ ‘ದಿ ಗ್ರೇಟ್‌ ಬ್ರಿಟಿಷ್‌ ಬೇಕ್‌ ಆಫ್‌’ ಟಿ.ವಿ ಬೇಕಿಂಗ್‌ ಸ್ಪರ್ಧೆ ವಿಜೇತೆಯಾದ ಕ್ವಿನ್‌ ಅವರು, ಹ್ಯಾಂಬಲ್ಟನ್‌ ಬೇಕರಿಯ ಸದಸ್ಯರ ನೆರವಿನಿಂದ ಬಹುದೊಡ್ಡ ಜಫ್ಫಾ ಕೇಕ್‌ ತಯಾರಿಸಿದ್ದಾರೆ. ಬಿಬಿಸಿ 4 ರೇಡಿಯೊ ಆಯೋಜಿಸಿದ್ದ  ಕಾರ್ಯಕ್ರಮದಲ್ಲಿ ಈ ಜಫ್ಫಾ ಕೇಕ್‌ ತಯಾರಿಸಲಾಗಿತ್ತು.  
 
5.6 ಕೆ.ಜಿ ಮೊಟ್ಟೆ, 6.1 ಕೆ.ಜಿ ಬೆಣ್ಣೆ, 6.1 ಕೆ.ಜಿ ಸಕ್ಕರೆ,  6.1ಕೆ.ಜಿ ಸಿದ್ಧಪಡಿಸಿಟ್ಟುಕೊಂಡ ಹಿಟ್ಟು ಹಾಗೂ 200 ಗ್ರಾಂ ವೆನಿಲ್ಲಾ ಬಳಸಿ ಮಾಡಿದ ಜಫ್ಫಾ ಕೇಕ್‌ ಇದಾಗಿದೆ. ಕೇಕ್‌ ಮೇಲೆ 12 ಕೆ.ಜಿ ಕಿತ್ತಳೆ ಜೆಲ್ಲಿ ಹಾಕಲಾಗಿದೆ. ಅದರ ಮೇಲೆ 15 ಕೆ.ಜಿ. ಡಾರ್ಕ್‌ ಚಾಕೊಲೇಟ್‌ ಕವರ್‌ ಮಾಡಲಾಗಿದೆ.
 
ಇಂಗ್ಲೆಂಡ್‌ನಲ್ಲಿ ಜಪ್ಫಾ ಕೇಕ್‌ಅನ್ನು ಮ್ಯಾಕ್‌ವಿಟ್ಟೆ ಮತ್ತು ಪ್ರೈಸ್‌ ಎಂಬುವರು 1927ರಲ್ಲಿ ಪರಿಚಯಿಸಿದರು. ಬಿಸ್ಕೇಟ್‌ ಗಾತ್ರದ ಈ ಸ್ಪಾಂಜ್‌ ಕೇಕ್‌ ಮೂರು ಪದರವನ್ನು ಒಳಗೊಂಡಿರುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.