ADVERTISEMENT

ಇರಲಾರದವನು ಹಾವು ಬಿಟ್ಟುಕೊಂಡ!

​ಪ್ರಜಾವಾಣಿ ವಾರ್ತೆ
Published 30 ಜುಲೈ 2015, 14:33 IST
Last Updated 30 ಜುಲೈ 2015, 14:33 IST

‘ಇರಲಾರದವನು ಇರುವೆ ಬಿಟ್ಟುಕೊಂಡ’ ಎಂಬ ಗಾದೆ ಮಾತಿದೆ. ಆದರೆ, ಲಂಡನ್‌ನಲ್ಲೊಬ್ಬ ಸುಮ್ಮನಿರಲಾರದೆ ಹಾವು ಬಿಟ್ಟುಕೊಂಡು, ಚಿಕಿತ್ಸೆಗಾಗಿ ಲಕ್ಷಗಟ್ಟಲೆ ಆಸ್ಪತ್ರೆ ಬಿಲ್‌ ಕಟ್ಟಿದ ಕಥೆ ಇದು!

ಹುಲಿ, ಸಿಂಹ, ಮೊಸಳೆ ಬಾಯಿಗೆ ಮುತ್ತಿಕ್ಕುತ್ತ ಸೆಲ್ಫೀ ತೆಗೆದುಕೊಳ್ಳುವ ಹುಚ್ಚುಸಾಹಸಿ ಹುಡುಗರ ಕಥೆಗಳನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಹೀಗೆ ಸೆಲ್ಫೀಯ ಅತಿಯಾದ ವ್ಯಾಮೋಹಕ್ಕೆ ಒಳಗಾಗಿದ್ದ ಬ್ರಿಟನ್‌ನ ಯುವಕನೊಬ್ಬ ಬುಡಬುಡಿಕೆ ಹಾವಿನ (rattlesnake/ಒಂದು ಜಾತಿಯ ವಿಷದ ಹಾವು) ಜೊತೆ ಸರಸವಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾನೆ.

ಇತ್ತ ಆ ಯುವಕ ಬುಡಬುಡಿಕೆ ಹಾವಿಗೆ ಮುತ್ತಿಕ್ಕುತ್ತ ಸೆಲ್ಫೀ ಚಿತ್ರಗಳನ್ನು ತೆಗೆಯುತ್ತಿದ್ದರೆ, ಅತ್ತ ಹಾವು ಇವನ ಮೂತಿ ಕಚ್ಚುತ್ತಿತ್ತು! ಓಹ್‌ ಈ ಚಿತ್ರ ಎಷ್ಟು ಚೆನ್ನಾಗಿ ಬಂದಿದೆ ಎನ್ನುವ ಸಂಭ್ರಮದಲ್ಲಿ ಆ ಯುವಕ ತೇಲುತ್ತಿದ್ದ. ಇದಾದ ಅರ್ಧ ಗಂಟೆ ಬಳಿಕ ಆತನ ದೇಹ ಪೂರ್ತಿ ಬಿಳುಚಿಕೊಂಡು ನಾಲಿಗೆ ಬಾಯಿಂದ ಹೊರ ಬಂದಿತ್ತು. ಸಾವು ಬದುಕಿನ ಮಧ್ಯೆ  ಹೋರಾಡುತ್ತಿದ್ದ ಆ ಯುವಕನನ್ನು ಮನೆಯವರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಆ ಯುವಕನ ಚಿಕಿತ್ಸೆಗೆ ಮನೆಯವರು ಖರ್ಚು ಮಾಡಿದ್ದು ಎಷ್ಟು ಗೊತ್ತೆ? ಬರೋಬ್ಬರಿ 1.5 ಲಕ್ಷ ಡಾಲರ್‌! ಅದಕ್ಕೇ ಹಿರಿಯರು ಹೇಳೋದು ‘ಇರಲಾರದವನು ಇರುವೆ ಬಿಟ್ಟುಕೊಂಡ’ ಅಂತ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.