ADVERTISEMENT

ಈಡೇರಿತು ಮಹೀರಾ ಆಸೆ!

ಬಾಲಿವುಡ್‌

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 19:30 IST
Last Updated 6 ಫೆಬ್ರುವರಿ 2017, 19:30 IST
ಈಡೇರಿತು ಮಹೀರಾ ಆಸೆ!
ಈಡೇರಿತು ಮಹೀರಾ ಆಸೆ!   
‘ರಯೀಸ್‌’ ಚಿತ್ರತಂಡದೊಂದಿಗೆ ವೇದಿಕೆ ಏರಬೇಕೆನ್ನುವ ಪಾಕಿಸ್ತಾನದ ನಟಿ ಮಹೀರಾ ಖಾನ್‌ ಆಸೆ ಕೊನೆಗೂ ಈಡೇರಿದೆ.
 
‘ರಯೀಸ್’ ಚಿತ್ರ ಪ್ರಚಾರದಲ್ಲಿ ನಟರಾದ ಶಾರುಕ್ ಖಾನ್, ನವಾಜುದ್ದೀನ್ ಸಿದ್ಧಿಕಿ ಅವರೊಂದಿಗೆ ಮಹೀರಾ ಭಾಗವಹಿಸಬೇಕಿತ್ತು. ಆದರೆ, ಪಾಕಿಸ್ತಾನ ಮೂಲದ ಕಲಾವಿದರಿಗೆ ಭಾರತ ಪ್ರವೇಶ ನಿಷೇಧ– ವಿವಾದದ ಹಿನ್ನೆಲೆಯಲ್ಲಿ ಮಹೀರಾಗೆ ಚಿತ್ರಪ್ರಚಾರದಲ್ಲಿ ಭಾಗವಹಿಸಲು ಆಗಲೇ ಇಲ್ಲ. 
 
ಆದರೆ, ಈಚೆಗೆ ‘ರಯೀಸ್‌’ ಯಶಸ್ವಿ ಪ್ರದರ್ಶನದ ನಿಮಿತ್ತ ನಿರ್ದೇಶಕ ರಿತೇಶ್‌ ಸಿದ್ವಾನಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಹೀರಾ ಆಸೆ ಈಡೇರಿದೆ. 
 
ಅದು ಹೇಗೆ ಅಂತೀರಾ? ಪಾಕಿಸ್ತಾನದಲ್ಲಿ ಕುಳಿತೇ ವಿಡಿಯೊ ಕಾನ್ಫರೆನ್ಸ್ ಮೂಲಕ ಮಹೀರಾ ‘ರಯೀಸ್‌’ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಮಹೀರಾ ಕೊನೆಗೂ ತಮ್ಮ ಆಸೆ ಈಡೇರಿಸಿಕೊಂಡಿದ್ದಾರೆ. 
 
‘ವಿಡಿಯೊ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದ ಅನುಭವ ಅದ್ಭುತವಾಗಿತ್ತು. ಚಿತ್ರ ಬಿಡುಗಡೆಗೂ ಮುನ್ನ ತಮಗಿದ್ದ ಈಗ ಆತಂಕ ನಿವಾರಣೆಯಾಗಿದೆ’ ಎಂದು ಮಹೀರಾ ಪತ್ರಿಕಾಗೋಷ್ಠಿಯಲ್ಲಿ ತಮ್ ಅಭಿಪ್ರಾಯ ಹಂಚಿಕೊಂಡಿದ್ದಾರೆ. 
 
‘ರಯೀಸ್‌’ ನಲ್ಲಿ ಶಾರುಖ್‌ಗೆ  ನಾಯಕಿಯಾಗಿ  ಮಹೀರಾ ಕಾಣಿಸಿಕೊಂಡಿದ್ದು, ಅವರ ಅಭಿನಯದ ಬಗ್ಗೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.