ADVERTISEMENT

ಈ ಡಿ.ಜೆ ಆರರ ಪೋರ!

​ಪ್ರಜಾವಾಣಿ ವಾರ್ತೆ
Published 23 ಮೇ 2017, 19:30 IST
Last Updated 23 ಮೇ 2017, 19:30 IST
ಈ ಡಿ.ಜೆ ಆರರ ಪೋರ!
ಈ ಡಿ.ಜೆ ಆರರ ಪೋರ!   

ಇಲ್ಲೊಬ್ಬ ಬಾಲಕ ಇದ್ದಾನೆ. ಆರು ವರ್ಷ ನಾಲ್ಕು ತಿಂಗಳು. ಅವನಿಗೆ  ತನ್ನ ವಯಸ್ಸಿನ ಇತರ ಮಕ್ಕಳಂತೆ ಆಟವಾಡಲು ಪುರುಸೊತ್ತಿಲ್ಲ. ಸಿಕ್ಕಿದರೂ ಅದರಲ್ಲಿ ಅವನಿಗೆ ಆಸಕ್ತಿಯಿಲ್ಲ. ಅವನು ಹಳೆಯ ಹಾಡುಗಳನ್ನು ಜಾಲಾಡುತ್ತಾ ಸಂಗೀತ ಮತ್ತು ನೃತ್ಯದ ಲೋಕದಲ್ಲಿ ಮುಳುಗಿರುತ್ತಾನೆ.

ನಮ್ಮ ಮಕ್ಕಳಂತೆ ಸೀಡಿಗಳನ್ನು ಕುಕ್ಕಿ, ಗೀಚಿ ಹಾಳು ಮಾಡುತ್ತಾ ಇರುತ್ತಾನೆಂದುಕೊಂಡಿರಾ? ಬಿಲ್‌ಕುಲ್‌ ಇಲ್ಲ. ಅವನು ವೃತ್ತಿಪರ ಡಿಸ್ಕೊ ಜಾಕಿ (ಡಿ.ಜೆ) ಆಗಿ ವಿಶ್ವವಿಖ್ಯಾತಿ ಪಡೆದಿದ್ದಾನೆ.

ಹೌದು, ಜಪಾನಿನ ಒಸಾಕಾ ಎಂಬಲ್ಲಿನ ಇಟ್ಸುಕಿ ಮೊರಿಟ ಎಂಬ ಈ ಬಾಲಕನ ಹೆಸರು ವಿಶ್ವದ ಅತ್ಯಂತ ಕಿರಿಯ ಡಿ.ಜೆ ಆಗಿ ಗಿನ್ನೆಸ್‌ ವಿಶ್ವ ದಾಖಲೆ ಪುಸ್ತಕದಲ್ಲಿ ಸೇರ್ಪಡೆಯಾಗಿದೆ.

ADVERTISEMENT

ಈಗಿನ್ನೂ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾಗಿರುವ ಬಾಲಕ, ಒಸಾಕಾದ ಎಲ್‌ ಬಾರ್‌ ಅಂಡ್‌ ರೆಸ್ಟೊರೆಂಟ್‌ನಲ್ಲಿ ಒಂದು ಗಂಟೆ ಡಿ.ಜೆ. ಸಂಗೀತ ಪ್ಲೇ ಮಾಡಿ ಈ ದಾಖಲೆ ಸೃಷ್ಟಿಸಿದ್ದಾನೆ.

ಬಾರ್‌ನಲ್ಲಿ ದೊಡ್ಡವರು ಹಾಗೂ ಮಕ್ಕಳ ಎದುರು ಈ ಬಾಲಕ ಜನಪ್ರಿಯ ಡಿ.ಜೆ ಟ್ರ್ಯಾಕ್‌ಗಳನ್ನು ಪ್ಲೇ ಮಾಡಿ ಎಲ್ಲರ ಗಮನಸೆಳೆದಿದ್ದಾನೆ.

ಚಿಕ್ಕ ವಯಸ್ಸಿಗೆ ಡಿ.ಜೆ ಆಗಬೇಕೆಂದು  ಯಾಕೆ ಬಯಸಿದೆ ಎಂದು ಕೇಳಿದರೆ ಬಾಲಕ ಉತ್ತರಿಸಿದ್ದು ಹೀಗೆ– ‘ಡಿ.ಜೆ ಸಂಗೀತಕ್ಕೆ ಜನ ಹೇಗೆ ವರ್ತಿಸುತ್ತಾರೆ ಎಂಬುದನ್ನು ನೋಡಿದ್ದೆ, ತಮಾಷೆಯಾಗಿರುತ್ತದೆ. ಅದಕ್ಕೆ ನಾನೂ ಡಿ.ಜೆ ಆದೆ’.

ಇಟ್ಸುಕಿಗೆ ಡ್ರಮ್‌ ಬಾರಿಸುವುದೆಂದರೆ ತುಂಬಾ ಇಷ್ಟವಂತೆ. ಡಿಸ್ಕೊ ಹಾಗೂ ರಾಕ್‌ ಮಿಶ್ರಣದ ಸಂಗೀತವನ್ನು ಪ್ಲೇ ಮಾಡಲು ಹೆಚ್ಚು ಬಯಸುತ್ತಾನಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.